ಮಡಿಕೇರಿ, ಏ. ೧೭: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿಗೆ ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎ ಮುಸ್ತಫಾ ಅವರು ಸನ್ಮಾನಿಸಿ ಗೌರವಿಸಿದರು. ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿನಿ ಅಫ್ನ ತಸ್ನೀಮ ವಿಜ್ಞಾನ (ಪಿ.ಸಿ.ಎಂ.ಬಿ) ವಿಭಾಗದಲ್ಲಿ ೫೭೫/೬೦೦ (೯೫.೮೩%) ಅಂಕ ಗಳಿಸಿ ತೇರ್ಗಡೆ ಹೊಂದಿದ್ದು ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎ ಮುಸ್ತಫಾ ಅವರು, ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ ನಿವಾಸಿಗಳಾದ ಎಂ.ಎ. ಯಾಕುಬ್ ಮತ್ತು ಬಿ.ಹೆಚ್. ಜಮೀಲ ದಂಪತಿಯ ಪುತ್ರಿಯಾಗಿರುವ ಅಫ್ನ ತಸ್ನೀಮ ಅವರ ಸಾಧನೆ ಇಡೀ ಗ್ರಾಮಕ್ಕೆ ಹೆಮ್ಮೆಯಾಗಿದ್ದು, ಮುಂದಿನ ದಿನಗಳಲ್ಲಿ ತಸ್ನೀಮ ಅವರ ಉನ್ನತ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.