ಮಡಿಕೇರಿ, ಏ. ೧೭: ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಚೇನಂಡ ಕಪ್‌ನಲ್ಲಿಂದು ಸಣ್ಣುವಂಡ ತಂಡದ ಪರ ಅಂತರರಾಷ್ಟಿçÃಯ ಹಾಕಿಪಟು ಒಲಂಪಿಯನ್ ಸಣ್ಣುವಂಡ ಕೆ ಉತ್ತಪ್ಪ ಪಾಲ್ಗೊಂಡು ಹ್ಯಾಟ್ರಿಕ್ ಸಾಧನೆ ಗೈದು ತಂಡದ ಗೆಲುವಿಗೆ ಕಾರಣರಾದರು. ನಾಪನೆರವಂಡ ಪರ ೭ ಮಂದಿ ಆಟಗಾರರಷ್ಟೆ ಮೈದಾನಕ್ಕಿಳಿದು ಗಮನ ಸೆಳೆದರು. ಈ ಪೈಕಿ ೮೭ರ ಹರೆಯದ ಪೊನ್ನಪ್ಪ ಅವರು ಕೂಡ ಇದ್ದರು.

ಸಣ್ಣುವಂಡ ತಂಡವು ೪-೧ ಅಂತರದಲ್ಲಿ ಮಲ್ಲೇಂಗಡ ತಂಡದ ವಿರುದ್ಧ ಜಯ ಸಾಧಿಸಿತು.

ಕೈಬುಲಿರ ತಂಡವು ಮುಕ್ಕಾಟಿರ(ಬೇತ್ರಿ) ತಂಡವನ್ನು ೧-೦ ಗೋಲುಗಳಿಂದ ಮಣಿಸಿತು.

ಅಂಜಪರವAಡ ತಂಡವು ನಂಬಿಯಪAಡ ತಂಡದ ವಿರುದ್ಧ ೪-೦ ಗೋಲುಗಳಿಂದ ಗೆಲುವು ಸಾಧಿಸಿತು.

ಬೊಳ್ಳಚಂಡ ತಂಡವು ಟೈ ಬ್ರೇಕರ್‌ನಲ್ಲಿ ೫-೪ ಅಂತರದಲ್ಲಿ ಮಲ್ಲಮಾಡ ತಂಡವನ್ನು ಸೋಲಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.

ಕಡೇಮಾಡ ತಂಡವು ಕಾಳಿಮಾಡ ತಂಡವನ್ನು ೧-೦ ಅಂತರದಲ್ಲಿ ಮಣಿಸಿತು.

ಬೊಟ್ಟೋಳಂಡ ತಂಡವು ಕೊಣಿಯಂಡ ತಂಡದ ವಿರುದ್ಧ ೫-೦ ಅಂತರದಲ್ಲಿ ಜಯ ಸಾಧಿಸಿತು.

ಕಾರೆರ ತಂಡವು ಬಾಚಿನಾಡಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೩-೨ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.

ಕಂಬೇಯAಡ ತಂಡವು ಕೋದೆಂಗಡ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು.

ಪಂದ್ಯAಡ ತಂಡವು ಆದೇಂಗಡ ತಂಡದ ವಿರುದ್ಧ ೨-೧ ಗೋಲುಗಳ ಅಂತರದಲ್ಲಿ ಗೆಲುವು ಬೀರಿತು.

ಬೊಳ್ಳೇಪಂಡ ತಂಡವು ಚೊಟ್ಟೆರ ತಂಡದ ವಿರುದ್ಧ ಟೈ ಬ್ರೇಕರ್‌ನಲ್ಲಿ ೩-೧ ಗೋಲುಗಳಿಂದ ಜಯ ಸಾಧಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲವಾಗಿತ್ತು.

ಮುಕ್ಕಾಟಿರ(ಕಡಗದಾಳು) ತಂಡವು ಮಾಳೇಟಿರ(ಕೆದಮುಳ್ಳೂರ್) ತಂಡವನ್ನು ೧-೦ ಗೋಲುಗಳಿಂದ ಮಣಿಸಿತು.

ಕುಮ್ಮಂಡ ತಂಡವು ಪಾಲೇಂಗಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು.

ಚೇಂದAಡ ತಂಡವು ಬೊಟ್ಟಂಗಡ ತಂಡದ ವಿರುದ್ಧ ೪-೦ ಗೋಲುಗಳಿಂದ ಜಯ ಸಾಧಿಸಿತು.

ಪಟ್ಟಚೆರುವಂಡ ತಂಡವು ಮೂಡೆರ ತಂಡದ ವಿರುದ್ಧ ೨-೧ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಶಾಂತೆಯAಡ ತಂಡವು ೨-೧ ಗೋಲುಗಳಿಂದ ಕೊಂಡಿರ ತಂಡವನ್ನು ಮಣಿಸಿತು.

ಕುಂದಿರ ತಂಡವು ನಾಪನೆರವಂಡ ತಂಡದ ವಿರುದ್ಧ ೨-೦ ಗೋಲುಗಳಿಂದ ಜಯ ಸಾಧಿಸಿತು.

ಪಾಡೆಯಂಡ ತಂಡವು ಮತ್ರಂಡ ತಂಡವನ್ನು ೩-೧ ಗೋಲುಗಳಿಂದ ಸೋಲಿಸಿತು.

ಮೆಕೇರಿರ ತಂಡವು ಅಮ್ಮಂಡ ತಂಡದ ವಿರುದ್ಧ ೧-೦ ಅಂತರದಲ್ಲಿ ಜಯ ಸಾಧಿಸಿತು.

ಮುಕ್ಕಾಟಿರ(ಬೋಂದ) ತಂಡವು ನಾಟೋಳಂಡ ತಂಡದ ವಿರುದ್ಧ ೩-೧ ಗೋಲುಗಳಿಂದ ಜಯ ಸಾಧಿಸಿತು.

ಮುಕ್ಕಾಟಿರ(ಹರಿಹರ) ತಂಡವು ಪುಲ್ಲೆರ ತಂಡದ ವಿರುದ್ಧ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮೂಕಚಂಡ ತಂಡವು ಚೀರಂಡ ತಂಡದ ವಿರುದ್ಧ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಕೋಳೆರ ತಂಡವು ಒಡಿಯಂಡ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ಕೋಳೆರ ಪರ ಹೃತಿಕ್ ಹ್ಯಾಟ್ರಿಕ್ ಸಾಧನೆ ಗೈದರು.