ವೀರಾಜಪೇಟೆ, ಏ. ೧೭: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯೮೬ರ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ೪೦ ವರ್ಷಗಳ ಬಳಿಕ ಪರಸ್ಪರ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಮೂಕಳೇರ ಧನು ಅಪ್ಪಣ್ಣ ಮುಂದಾಳತ್ವದಲ್ಲಿ ಗೋಣಿಕೊಪ್ಪಲಿನ ಖಾಸಗಿ ಹೊಟೇಲ್ ಒಂದರಲ್ಲಿ ಭೇಟಿಯಾದ ೨೮ ಹಳೆಯ ವಿದ್ಯಾರ್ಥಿಗಳು ಪರಸ್ಪರ ಒಂದೆಡೆ ಸೇರಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊAಡರು. ಡಾ. ನಡಿಕೇರಿಯಂಡ ತೇಜ ಪೂವಯ್ಯ, ಮುಕ್ಕಾಟಿರ ತಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು.