ಕುಶಾಲನಗರ, ಇ. ೧೭: ಇಲ್ಲಿನ ಬಾಲ ಗೋಕುಲ ಆಶ್ರಯದಲ್ಲಿ ಹೊಂಗಿರಣ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸ್ಥಳೀಯ ಕೋಣ ಮಾರಿಯಮ್ಮ ದೇವಾಲಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ವನಿತಾ ಚಂದ್ರಮೋಹನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು ಪೋಷಕರ ಪ್ರಮುಖವಾದ ಕೆಲಸವಾಗಿದೆ ಎಂದರು.
ಶಿಬಿರದಲ್ಲಿ ಮಕ್ಕಳಿಗೆ ಪ್ರಾರ್ಥನೆ, ಶ್ಲೋಕಗಳು ದೇಶಭಕ್ತಿ ಮತ್ತಿತರ ವಿಷಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಸಾಗಿದೆ ಎಂದು ಕಾರ್ಯಕ್ರಮ ಸಂಚಾಲಕರಾದ ದೀಪಾ ಸುರೇಂದ್ರ ತಿಳಿಸಿದರು. ಕುಶಾಲನಗರ ಕಾವೇರಿ ಜೆಸಿಐ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಅಮೃತರಾಜ್, ಬಾಲ ಗೋಕುಲದ ಕಾವ್ಯ ವಿಕ್ರಂ, ಕೃತಿಕಾ ಸದಾಶಿವ, ಅಮಿತಾ ಮತ್ತಿತರರು ಇದ್ದರು.