ಚೆಯ್ಯಂಡಾಣೆ, ಏ. ೧೭: ಕೊಡಗಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ದರ್ಗಾದಲ್ಲಿ ನಡೆಯುವÀ ಉರೂಸ್ ಸಮಾರಂಭಕ್ಕೆ ಶ್ರದ್ಧಾಭಕ್ತಿಯ ಚಾಲನೆ ದೊರೆಯಿತು.

ಶುಕ್ರವಾರದ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಸಮಸ್ತ ಮುಷಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾದ ಅಬ್ದುಲ್ಲಾ ಫೈಝಿ ಎಡಪಾಲ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಧ್ವಜಾರೋಹಣ ನೆರವೇರಿಸಿದರು.ಬಳಿಕ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಮಸ್ತ ಮುಷಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲಾ ಫೈಝಿ ಉದ್ಘಾಟಿಸಿ ಮಾತನಾಡಿ, ಉರೂಸ್ ಆಚರಣೆ ಎಂಬುದು ಮಹಾತ್ಮರಾದ ಅಲ್ಲಾಹುವಿನ ಔಲಿಯಾಗಳನ್ನು ಗೌರವಿಸಿ ಆರಾದಿಸುವ ಒಂದು ಪುಣ್ಯ ಕಾರ್ಯವಾಗಿದೆ. ಔಲಿಯಾಗಳನ್ನು ಮುಂದಿಟ್ಟು ದೇವರನ್ನು ಪ್ರಾರ್ಥಿಸಿದರೆ ಅದಕ್ಕೆ ಪ್ರತಿಫಲ ಸಿಗಲಿದೆ ಎಂದರು. ಮೊಹಮ್ಮದ್ ಕುಂಞ ಸಖಾಫಿ ಕೊಲ್ಲಂ ಹಾಗೂ ಅಬು ಸಹೀದ್ ಹುಸೈನ್ ಮೌಲವಿ ಕುಂಜಿಲ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಎಮ್ಮೆಮಾಡು ಮಸೀದಿಯ ಖತೀಬರಾದ ರಾಝಿಕ್ ಫೈಝಿ ಅವರು ಮುಖ್ಯ ಪ್ರಭಾಷಣ ನಡೆಸಿದರು. ಉರೂಸ್ ಕಾರ್ಯಕ್ರಮದ ಅಂಗವಾಗಿ ತಾ.೧೭ ರಿಂದ ೨೪ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ತಾ.೨೦ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ರಾಜಕೀಯ ನೇತಾರರು, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ತಾ.೨೪ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಎಮ್ಮೆಮಾಡು ಜಮಾಅತ್ ಉಪಾಧ್ಯಕ್ಷ ಚಂಬರAಡ ಮಾಹಿನ್, ಮಸೀದಿಯ ಮುದರ್ರಿಸ್ ಹಂಝ ಸಖಾಫಿ, ಎಮ್ಮೆಮಾಡು ಜಮಾಅತ್ ಮಾಜಿ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಅಯ್ಯಂಗೇರಿ ಜಮಾಅತ್ ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ತಂಙಳ್, ಶಹೀದಿಯ ಅನಾಥಾಲಯದ ಅಧ್ಯಕ್ಷ ಶಾದುಲಿ ಹಾಜಿ, ಕಾರ್ಯದರ್ಶಿ ಮೊಯ್ದು ಕುಂಞÂ, ಮಾಜಿ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಜಮಾಅತ್ ಮಾಜಿ ಅಧ್ಯಕ್ಷರುಗಳಾದ ಉಸ್ಮಾನ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಮೂಸ ಹಾಜಿ, ಹಸೈನಾರ್ ಹಾಜಿ, ಹಂಝ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಸಯ್ಯಿದ್ ಝಕರಿಯ ತಂಙಳ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು. ಹಂಝ ಸಖಾಫಿ ಪ್ರಾರ್ಥಿಸಿ, ಸಯ್ಯಿದ್ ಝಕರಿಯ ತಂಙಳ್ ಸ್ವಾಗತಿಸಿ, ಸುಲೈಮಾನ್ ಸಖಾಫಿ ವಂದಿಸಿದರು.