ಮಡಿಕೇರಿ ಏ.೧೬ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ತಾ .೧೬ ರಂದು ಗೆಲುವು ಸಾಧಿಸಿದ ತಂಡಗಳು.

ಮೈದಾನ ೧ರಲ್ಲಿ ಅಯ್ಯಮಾಡ ಮತ್ತು ಮಲ್ಲಾಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಾಜಿರಕ್ಕೆ ೮ ವಿಕೆಟ್ ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಯ್ಯಮಾಡ ೬ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೪೩ ರನ್‌ಗಳನ್ನು ಗಳಿಸಿತು. ಮಲ್ಲಾಜಿರ ೬ ಓವರ್ ೨ ವಿಕೆಟ್ ನಷ್ಟಕ್ಕೆ ೪೫ ರನ್ ಗಳನ್ನು ಸೇರಿಸಿ ಗೆಲುವು ಕಂಡಿತು.

ಚಾರಿಮAಡ ಮತ್ತು ಆಟ್ರಂಗಡ ನಡುವಿನ ಪಂದ್ಯದಲ್ಲಿ ಚಾರಿಮಂಡ ೫ ರನ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚಾರಿಮಂಡ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೮೪ ರನ್ ಸೇರಿಸಿತು. ಆಟ್ರಂಗಡ ೬ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೭೯ ರನ್‌ಗಳನ್ನು ಗಳಿಸಿ ಸೋಲು ಕಂಡಿತು.

ಮಲ್ಲೇಂಗಡ ಮತ್ತು ಮಾಚೆಟ್ಟಿರ (ಬಾಳುಗೋಡು) ನಡುವಿನ ಹಣಾಹಣಿಯಲ್ಲಿ ಮಾಚೆಟ್ಟಿರ ೮ ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮಲ್ಲೇಂಗಡ ೬ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೫೩ ರನ್ ಗಳನ್ನು ಗಳಿಸಿತು. ಮಾಚೆಟ್ಟಿರ ೪.೧ ಓವರ್ ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೫ ರನ್‌ಗಳನ್ನು ಸೇರಿಸಿ ಜಯ ಸಾಧಿಸಿತು.

ಕಾಡ್ಯಮಾಡ ಮತ್ತು ತಾಚಮಂಡ (ಗರ್ವಾಲೆ) ನಡುವಿನ ಪಂದ್ಯದಲ್ಲಿ ಕಾಡ್ಯಮಾಡ ತಂಡಕ್ಕೆ ೧೦ ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತಾಚಮಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೬ ರನ್ ಗಳನ್ನು ಸೇರಿಸಿತು. ಕಾಡ್ಯಮಾಡ ೩.೪ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೬೭ ರನ್ ಗಳನ್ನು ಗಳಿಸಿ ಜಯಭೇರಿ ಬಾರಿಸಿತು.

ಕಾಂಡೆರ ಮತ್ತು ಬಾಚಿರ ನಡುವಿನ ಪಂದ್ಯದಲ್ಲಿ ಕಾಂಡೆರ ೮ ವಿಕೆಟ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಚಿರ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೬೩ ರನ್ ಗಳನ್ನು ಗಳಿಸಿತು. ಕಾಂಡೆರ ೩ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೬೮ ರನ್ ಗಳನ್ನು ಸೇರಿಸಿ ಗೆಲುವು ಕಂಡಿತು.

ಕೊಟ್ರAಗಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡ ೪೫ ರನ್‌ಗಳಿಂದ ವಿಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಲಿಯಂಡ ೬ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೭ ರನ್‌ಗಳನ್ನು ಗಳಿಸಿತು. ಕೊಟ್ರಂಗಡ ೬ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೩೨ ರನ್‌ಗಳನ್ನಷ್ಟೇ ಸೇರಿಸಿ ಸುಲಭವಾಗಿ ಸೋಲೊಪ್ಪಿಕೊಂಡಿತು.

ಮೈದಾನ ೨ರಲ್ಲಿ ಅಚ್ಚಪ್ಪಂಡ ಮತ್ತು ಮಾಚಿಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಚ್ಚಪ್ಪಂಡ ೮ ವಿಕೆಟ್‌ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಚಿಮಂಡ ೬ ಓವರ್ ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೨೬ ರನ್‌ಗಳನ್ನು ಗಳಿಸಿತು. ಅಚ್ಚಪ್ಪಂಡ ೨.೫ ಓವರ್ ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೭ ರನ್‌ಗಳನ್ನು ಸೇರಿಸಿ ಗೆಲುವು ಕಂಡಿತು.

ಬಡುವAಡ ಮತ್ತು ಕೊಡಂದೆರ ತಂಡಗಳ ನಡುವಿನ ಪಂದ್ಯದಲ್ಲಿ ಕೊಡಂದೆರ ತಂಡ ೯ ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಡುವಂಡ ೬ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೭ ರನ್‌ಗಳನ್ನು ಸೇರಿಸಿತು. ಕೊಡಂದೆರ ೪.೧ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೦ ರನ್‌ಗಳನ್ನು ಗಳಿಸಿ ಗೆಲುವಿನ ನಗು ಬೀರಿತು.

ಅಜ್ಜಮಾಡ ಮತ್ತು ತೀತಿರ (ಹುದಿಕೇರಿ) ನಡುವಿನ ಹಣಾಹಣಿಯಲ್ಲಿ ತೀತಿರ ೬೭ ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತೀತಿರ ೬ ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೧೦೯ ರನ್‌ಗಳನ್ನು ಗಳಿಸಿತು. ಅಜ್ಜಮಾಡ ೫.೫ ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ ೪೨ ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.

ಅಜ್ಜೇಟಿರ ಮತ್ತು ಕಾಳಿಮಾಡ ನಡುವಿನ ಪಂದ್ಯದಲ್ಲಿ ಅಜ್ಜೇಟಿರ ೧೧ ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಜ್ಜೇಟಿರ ೬ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೮೪ ರನ್ ಗಳನ್ನು ಗಳಿಸಿತು. ಕಾಳಿಮಾಡ ೬ ಓವರ್ ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೭೩ ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.

ಕುಂಞÂರ ಮತ್ತು ಚೌರಿರ ನಡುವಿನ ಪಂದ್ಯದಲ್ಲಿ ಚೌರಿರ ತಂಡಕ್ಕೆ ೯ ವಿಕೆಟ್‌ಗಳ ಜಯ ಲಭಿಸಿತು. ಕುಂಞÂರ ೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೪ ರನ್‌ಗಳನ್ನು ಸೇರಿಸಿತು. ಚೌರಿರ ೩.೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೫ ರನ್‌ಗಳನ್ನು ಗಳಿಸಿ ಗೆಲುವು ಸಾಧಿಸಿತು.

ಸರ್ಕಂಡ ಮತ್ತು ಬಾಚಿನಾಡಂಡ ನಡುವಿನ ಪಂದ್ಯದಲ್ಲಿ ಸರ್ಕಂಡ ೮ ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಚಿನಾಡಂಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೭ ರನ್ ಗಳನ್ನು ಗಳಿಸಿತು. ಸರ್ಕಂಡ ೪.೧ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೭೩ ರನ್ ಗಳನ್ನು ಸೇರಿಸಿ ಗೆಲುವು ಕಂಡಿತು.

ಪAದ್ಯAಡ ಮತ್ತು ಕೊಣಿಯಂಡ ನಡುವಿನ ಪಂದ್ಯದಲ್ಲಿ ಪಂದ್ಯAಡ ೬ ವಿಕೆಟ್‌ಗಳ ವಿಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಣಿಯಂಡ ೬ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೬೩ ರನ್ ಗಳನ್ನು ಸೇರಿಸಿತು. ಪಂದ್ಯAಡ ೬ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೬೪ ರನ್‌ಗಳನ್ನು ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.