ಮಡಿಕೇರಿ, ಏ. ೧೬: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿAದು ಕುಡೆಕಲ್ಲು ಹಾಗೂ ಕಟ್ಟೆಮನೆ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ದೇವಜನ ತಂಡ ನಿಗದಿತ ೬ ಓವರ್‌ಗಳಲ್ಲಿ ೨೩ ರನ್ ಗಳಿಸಿದರೆ, ಕರ್ಕರನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ೨.೩ ಓವರ್‌ಗಳಲ್ಲಿ ೨೭ ರನ್ ಗಳಿಸಿ ಗೆಲುವು ಸಾಧಿಸಿತು. ದೇವಾರಿರ ತಂಡ ೪ ವಿಕೆಟ್‌ಗೆ ೪೦ ರನ್ ಗಳಿಸಿದರೆ, ಕುಡೆಕಲ್ಲು ತಂಡ ೩.೫ ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿ ಗೆಲುವು ಸಾಧಿಸಿತು. ಚೆರಿಯಮನೆ ತಂಡ ೪ ವಿಕೆಟ್‌ಗೆ ೫೪ ರನ್ ಗಳಿಸಿದರೆ, ಕೋಳಿಮಾಡು ತಂಡ ೨ ವಿಕೆಟ್ ನಷ್ದಲ್ಲಿ ಗುರಿ ಸಾಧಿಸಿತು. ಕೈಬಿಲಿ ತಂಡ ೫ ವಿಕೆಟ್‌ಗೆ ೫೭ ರನ್ ಗಳಿಸಿದರೆ, ಓಡಿಯನ ತಂಡ ೭ ವಿಕೆಟ್ ಕಳೆದುಕೊಂಡು ೪೨ ರನ್ ಮಾತ್ರ ಗಳಿಸಿ ೧೫ ರನ್‌ಗಳ ಅಂತರದಿAದ ಸೋಲನುಭವಿಸಿತು.ಮತ್ತೊಂದು ಪಂದ್ಯದಲ್ಲಿ ಕರ್ಕರನ ತಂಡ ೫ ವಿಕೆಟ್‌ಗೆ ೨೯ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕುಡೆಕಲ್ಲು ತಂಡ ೩.೩ ಒವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.

ಗುಡ್ಡೆಮನೆ ತಂಡ ೭ ವಿಕೆಟ್‌ಗೆ ೩೮ ರನ್ ಗಳಿಸಿದರೆ, ಕೋಳಿಮಾಡು ತಂಡ ೩ ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕಟ್ಟೆಮನೆ ತಂಡ ೩ ವಿಕೆಟ್‌ಗೆ ೫೨ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕೈಬಿಲಿ ತಂಡ ೭ ವಿಕೆಟ್ ಕಳೆದುಕೊಂಡು ೩೭ ರನ್ ಮಾತ್ರ ಗಳಿಸಿ ೧೫ ರನ್‌ಗಳ ಅಂತರದಿAದ ಸೋಲನುಭವಿಸಿತು.

ಇನ್ನೊಂದು ಪಂದ್ಯದಲ್ಲಿ ಕೋಳಿಮಾಡು ತಂಡ ೩ ವಿಕೆಟ್‌ಗೆ ೫೦ ರನ್ ಕಲೆ ಹಾಕಿದರೆ, ಉತ್ತರವಾಗಿ ಆಡಿದ ಕುಡೆಕಲ್ಲು ತಂಡ ೩ ಓವರ್‌ನಲ್ಲಿ ಒಂದು ವಿಕೆಟ್ ನಷ್ಟದಲ್ಲಿ ೫೩ ರನ್ ಗಳಿಸಿ ಗೆಲುವು ಕಂಡಿತು. ಕಾನಡ್ಕ ತಂಡ ೪ ವಿಕೆಟ್‌ಗೆ ೩೬ ರನ್ ಗಳಿಸಿದರೆ, ಕಟ್ಟೆಮನೆ ತಂಡ ೪ ಓವರ್‌ಗಳಲ್ಲಿ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲಪಿತು.