ವೀರಾಜಪೇಟೆ, ಏ. ೧೬: ಕಣ್ಣಂಗಾಲ ಗ್ರಾಮ ವ್ಯಾಪ್ತಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿದ ಹಿನ್ನಲೆ ಗ್ರಾಮಸ್ಥರು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರಿಗೆ ಗೌರವ ಸಲ್ಲಿಸಿದರು.
ಕಳೆದ ಹಲವು ವರ್ಷದಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು, ಸ್ಥಳೀಯ ಪ್ರಮುಖರಾದ ಮಾಚಂಡ ಕಿರಣ್ ಅವರ ನೇತೃತ್ವದಲ್ಲಿ ಶಾಸಕ ಪೊನ್ನಣ್ಣ ಅವರಿಗೆ ನೀರಿನ ಸಮಸ್ಯೆ ಬಗೆಹರಿಸಿ ಕೊಡುವಂತೆ ಈ ಹಿಂದೆ ಮನವಿ ಸಲ್ಲಿಸಿದ್ದರು.
ಕೇವಲ ಒಂದು ವಾರದಲ್ಲಿ, ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿ ಗ್ರಾಮಸ್ಥರಿಗೆ ನೀರಿನ ಸರಬರಾಜು ಸಮರ್ಪಕವಾಗಿ ಆಗುವಂತೆ ಮಾಡಿದ್ದರಿಂದ ಮಾಚಂಡ ಕಿರಣ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶಾಸಕರನ್ನು ಭೇಟಿಯಾಗಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಚ್ಚಾರಂಡ ಕಿರಣ್, ಸುಬ್ಬಯ್ಯ, ಗಣೇಶ್, ಬೋಪಣ್ಣ, ಜಯ ಪೂಣಚ್ಚ, ತಮ್ಮಯ್ಯ, ರವಿ, ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.