ಮುಳ್ಳೂರು, ಏ. ೧೬ : ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ೨೮ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಸಮಿತಿ ಮತ್ತು ದೇವಾಂಗ ಸಂಘದ ವತಿಯಿಂದ ನಡೆಸುತ್ತಿರುವ ದೇವಸ್ಥಾನದ ೨೮ನೇ ವಾರ್ಷಿಕೋತ್ಸವ ಮತ್ತು ಪೂಜಾ ಮಹೋತ್ಸವವು ಮಂಗಳವಾರ ಮುಂಜಾನೆಯಿAದ ಪ್ರಾರಂಭಗೊAಡಿತು. ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ದೇವಸ್ಥಾನದಲ್ಲಿ ಅರ್ಚಕರು ಶ್ರೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಶ್ರೀ ಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತಗಳನ್ನು ಪಠಿಸಿ ಅಭಿಷೇಕ ನೆರವೇರಿಸಿದರು.

ಬೆಳಿಗ್ಗೆ ೯ ಗಂಟೆಗೆ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್‌ವರ್ಣ, ಕಲಶಾರಾಧನೆ ಬಳಿಕ ೧೦ ಗಂಟೆಗೆ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಹೋಮ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಿದ ಬಳಿಕ ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿಯ ನಂತರ ಮಧ್ಯಾಹ್ನ ೧೨:೩೦ ರಿಂದ ಮಹಾಮಂಗಳಾರತಿ ಮತ್ತು ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಸಂಜೆ ೪ ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪೂಜಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ನಡೆಯಿತು.