ಮಡಿಕೇರಿ, ಏ.೧೬: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ೩ ಹ್ಯಾಟ್ರಿಕ್‌ಗಳು ದಾಖಲಾದವು. ಕಳ್ಳಿಚಂಡ ತಂಡದ ಪರ ಪ್ರಸ್ತುತ ಲಕ್ನೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಕಳ್ಳಿಚಂಡ ಬೋಪಣ್ಣ ಅವರು ಆಟವಾಡಿದರು.

ಕಾಂಡAಡ ತಂಡವು ಚಾಮೆರ ತಂಡದ ವಿರುದ್ಧ ೪-೦ ಗೋಲುಗಳಿಂದ ಜಯ ಸಾಧಿಸಿತು. ಮೇರಿಯಂಡ ತಂಡವು ೨-೧ ಗೋಲುಗಳ ಅಂತರದಲ್ಲಿ ಅಪ್ಪಾರಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಮಂದೆಯAಡ ತಂಡವು ಅವರೆಮಾದಂಡ ತಂಡದ ವಿರುದ್ಧ ೨-೦ ಅಂತರದಲ್ಲಿ ಜಯ ಸಾಧಿಸಿತು.

ಉದಿಯಂಡ ತಂಡವು ಟೈ ಬ್ರೇಕರ್‌ನಲ್ಲಿ ಕೆಚ್ಚೆಟ್ಟಿರ ತಂಡವನ್ನು ೪-೩ ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯವು ೧-೧ ಸಮಬಲವಾಗಿತ್ತು. ಅರೆಯಡ ತಂಡವು ಬೊಳಕಾರಂಡ ತಂಡದ ವಿರುದ್ಧ ೪-೨ ಗೋಲುಗಳಿಂದ ಜಯ ಸಾಧಿಸಿತು. ಮಚ್ಚಾರಂಡ ತಂಡವು ಪಳಂಗಿಯAಡ ತಂಡವನ್ನು ೫-೧ ಗೋಲುಗಳಿಂದ ಮಣಿಸಿತು. ಮಚ್ಚಾರಂಡ ಪರ ಅಯ್ಯಪ್ಪ ಹ್ಯಾಟ್ರಿಕ್ ಸಾಧನೆ ಗೈದರು.

ಪುಳ್ಳಂಗಡ ತಂಡವು ಕರಿನೆರವಂಡ ತಂಡವನ್ನು ೫-೨ ಗೋಲುಗಳಿಂದ ಸೋಲಿಸಿತು. ನಾಗಂಡ ತಂಡವು ಕಬ್ಬಚ್ಚಿರ ತಂಡದ ವಿರುದ್ಧ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಾಲೆಕಂಡ ತಂಡವು ಕಾಳೆಯಂಡ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು.

ನಾಳಿಯಂಡ ತಂಡವು ತೇಲಪಂಡ ತಂಡದ ವಿರುದ್ಧ ೩-೦ ಗೋಲುಗಳಿಂದ ಜಯ ಸಾಧಿಸಿತು. ತೀತರಮಾಡ ತಂಡವು ಬಲ್ಯಾಟಂಡ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು.

ಚೀಯಕಪೂವಂಡ ತಂಡವು ನೆರ್ಪಂಡ ತಂಡವನ್ನು ೪-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ಚೀಯಕಪೂವಂಡ ಚೇತನ್ ಚಂಗಪ್ಪ ಹ್ಯಾಟ್ರಿಕ್ ಬಾರಿಸಿದರು. ಪರದಂಡ ತಂಡವು ಮುದ್ದಂಡ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ಪರದಂಡ ಪರ ರಂಜನ್ ಅಯ್ಯಪ್ಪ ಹ್ಯಾಟ್ರಿಕ್ ಗೋಲುಗಳನ್ನು ದಾಖಲಿಸಿದರು.

ನಂದೇಟಿರ ತಂಡವು ಚೆಂಬಾAಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೩-೨ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು. ಇಟ್ಟಿರ ತಂಡವು ಪೊನ್ನೋಲತಂಡ ತಂಡವನ್ನು ೫-೦ ಅಂತರದಲ್ಲಿ ಮಣಿಸಿತು.

ಮುಕ್ಕಾಟಿರ(ಮೂವತ್ತೊಕ್ಲು) ತಂಡವು ಪೊರ್ಕೊಂಡ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು.

ಕಾಯಪಂಡ ತಂಡವು ಚೋಳಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೩-೧ ಗೋಲುಗಳ ಅಂತರದಲ್ಲಿ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು. ಐಚಂಡ ತಂಡವು ವಾಂಚಿರ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ಎಳ್ತಂಡ ತಂಡವು ಟೈ ಬ್ರೇಕರ್‌ನಲ್ಲಿ ೪-೩ ಅಂತರದಲ್ಲಿ ಕಳ್ಳಿಚಂಡ ತಂಡವನ್ನು ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.