ವೀರಾಜಪೇಟೆ, ಏ. ೧೬: ವೀರಾಜಪೇಟೆ ಸಮೀಪದ ಶ್ರೀ ಕಾವಾಡಿ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಸಂಪನ್ನಗೊAಡಿತು. ಉತ್ಸವದ ಅಂಗವಾಗಿ, ವಿವಿಧ ಪೂಜಾ ಪುನಸ್ಕಾರಗಳು, ಧಾರ್ಮಿಕ ವಿಧಿವಿಧಾನಗಳು ನಡೆದವು.
ಸಾಂಪ್ರದಾಯಿಕ ಆಚರಣೆಗಳಾದ ದುಡಿಕೊಟ್ಟ್ ಪಾಟ್, ಬೊಳಕಾಟ್, ದೇವರ ನೃತ್ಯ ಬಲಿ ಪ್ರದಕ್ಷಿಣೆ ನಡೆದವು. ಉತ್ಸವದ ಅಂಗವಾಗಿ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಮಾಡಲಾಯಿತು. ಭಗವತಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಕಾವಾಡಿ ದೇವಾಲಯದಿಂದ ಹೊರಟು ಅಮ್ಮತ್ತಿ ಪಟ್ಟಣದಲ್ಲಿ ಸಂಚರಿಸಿ ಮತ್ತೆ ದೇವಾಲಯಕ್ಕೆ ಆಗಮಿಸಿತು.
ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನವನ್ನು ಕಣ್ತುಂಬಿಕೊAಡರು.
ಶಾಸಕ ಪೊನ್ನಣ್ಣ ಭೇಟಿ
ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಾಂಗ್ರಸ್ ವಲಯ ಅಧ್ಯಕ್ಷ ಪಳೆಯತಂಡ ಹರಿ, ಪ್ರಮುಖರಾದ ವಿನೋದ ಗಣಪತಿ, ವಿವೇಕ್, ಸೋಮಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರತ್ಯು, ಅಪುö್ರ ರವೀಂದ್ರ, ಕೃಷ್ಣ, ಜಗದೀಶ್, ಊರಿನ ತಕ್ಕ ಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.