ಚೆಯ್ಯಂಡಾಣೆ, ಏ. ೧೫: ಇಂದಿನ ಕಾಲಘಟ್ಟದಲ್ಲಿ ಮಾನವೀಯತೆ ಸಾರುವ ಕಾರ್ಯಕ್ರಮ ಅತ್ಯವಶ್ಯಕ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.

ಕೊಂಡAಗೇರಿ ಉರೂಸ್ ಸೌಹಾರ್ದ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರಕಾರ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸಮಸ್ಯೆಗೆ ಪರಿಹಾರ ಹೀಗೆ ಅನೇಕ ಕಾರ್ಯಕ್ರಮಗಳನ್ನು ಸರಕಾರ ಕೊಡಗಿಗೆ ನೀಡಿದೆ. ಕೊಂಡAಗೇರಿಯಲ್ಲೂ ಕೂಡ ಹಲವಾರು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ದೊರೆತ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾಮಗಾರಿ ನಡೆದಿದೆ. ಮುಂದಿನ ದಿನಗಳಲ್ಲಿ ಕೂಡ ಅಭಿವೃದ್ಧಿ ಕಾಮಗಾರಿ ಮುಂದುವರಿಯಲಿದೆ ಎಂದರು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಮಾತನಾಡಿದರು. ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ಶಾಫಿ ಸಅದಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿ, ಆರ್ಥಿಕ ಹಾಗೂ ಭೌತಿಕವಾಗಿ ಮುಸಲ್ಮಾನರು ಮುಂದುವರೆದಿದ್ದರೂ ಕೂಡ ಶೈಕ್ಷಣಿಕ ವಿಚಾರದಲ್ಲಿ ಇಂದು ಅತ್ಯಂತ ಹಿಂದುಳಿದ ವರ್ಗದವರಾಗಿದ್ದೇವೆ. ದೇಶದಲ್ಲಿ ಶೇ೨೦ರಷ್ಟು ಮುಸಲ್ಮಾನರಿದ್ದು ತೀವ್ರ ಹಿಂದುಳಿದಿದ್ದೇವೆ. ಶೇ ೧.೧೭ ಇರುವ ಸಿಖ್ ವಿಭಾಗವು ಶಿಕ್ಷಣ ಪಡೆಯುವುದರ ಮೂಲಕ ಇಂದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದೆ. ಇದೇ ರೀತಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.

ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಯಾಬುದ್ದೀನ್ ಅಲ್ ಐದರೂಸಿ ತಂಙಳ್ ಕಿಲ್ಲೂರ್ ಉದ್ಘಾಟಿಸಿ ಮಾತನಾಡಿದರು. ಇದೆ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ತಕ್ಕ ಮುಖ್ಯಸ್ಥರಾದ ಕುಂಞÂ ಅಹ್ಮದ್ ಮುಸ್ಲಿಯಾರ್, ಇಕ್ಬಾಲ್ ಹಾಜಿ, ಜಮಾಅತ್ ಉಪಾಧ್ಯಕ್ಷ ಬಶೀರ್, ಕೋಶಾಧಿಕಾರಿ ಕರೀಂ ಹಾಜಿ, ಕಾರ್ಯದರ್ಶಿ ಮುಜೀಬ್, ಕೆ.ಎಚ್.ಅಹ್ಮದ್, ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಮರ್ಕಝ್‌ನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ, ವಕ್ಫ್ ಅಧಿಕಾರಿ ಇರ್ಫಾನ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ವೀರಾಜಪೇಟೆ ತಾಲೂಕು ಅಧ್ಯಕ್ಷ ರಫೀಕ್ ಕೊಳುಮಂಡ, ವೀರಾಜಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮತೀನ್, ಹಮೀದ್ ಕಬಡಕ್ಕೇರಿ, ಎರ್ಮು ಹಾಜಿ, ಹುಸೈನ್ ಹಾಜಿ, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ರಹ್ಮನ್ (ಅಂದಾಯಿ), ಹನೀಫ್ ಸಖಾಫಿ, ಎ.ಎಂ. ಅಬ್ದುಲ್ಲ, ಜಮಾಅತ್ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಉರೂಸ್ ಸಮಾರಂಭದ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಝಿಯಾರತ್ ನಡೆದ ಬಳಿಕ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಡಾ. ಹಫೀಝ್ ಜುನೈದ್ ಜೌಹರಿ ಕೊಲ್ಲಂ ಧಾರ್ಮಿಕ ಮತ ಪ್ರವಚನ ನಡೆಸಿದರು. ಕಾರ್ಯಕ್ರಮದ ಮೊದಲಿಗೆ ಕೊಂಡAಗೇರಿ ಮುದರ್ರಿಸ್ ಮೊಹ್ಯಿಯದ್ದೀನ್ ಪಾಳಿಲಿ ಅಲ್ ಅಫ್ಲಲಿ ಪ್ರಾರ್ಥಿಸಿ, ಹನೀಫ್ ಸಖಾಫಿ ಸ್ವಾಗತಿಸಿ, ವಂದಿಸಿದರು.