ಮಡಿಕೇರಿ, ಏ. ೧೫: ಇತ್ತೀಚೆಗೆ ಕುಶಾಲನಗರ ಅನುಗ್ರಹ ಕಾಲೇಜಿನಲ್ಲಿ ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆಸಲಾದ ಸಭೆಯಲ್ಲಿ ಕುಶಾಲನಗರ ತಾಲೂಕು ಕೆ.ಜೆ.ವಿ.ಎಸ್. ನೂತನ ಘಟಕ ರಚಿಸಲಾಯಿತು.

ಜಿಲ್ಲಾ ಕೆ.ಜೆ.ವಿ.ಎಸ್. ಸಲಹೆಗಾರ ಈ. ಸುಲೇಮಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎನ್.ಎಸ್. ಕುಮಾರ್ ಅವರು ನೂತನ ಸಮಿತಿಯ ರೂಪುರೇಷೆಗಳು ಹಾಗೂ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ಅಧ್ಯಕ್ಷರಾಗಿ ಟಿ.ಬಿ. ಮಂಜುನಾಥ್, ಉಪಾಧ್ಯಕ್ಷರಾಗಿ ಸಿ.ಈ. ಹರೀಶ್, ಲೀಲಾವತಿ ತೊಡಿಕಾನ, ಕಾರ್ಯದರ್ಶಿಯಾಗಿ ಎಸ್.ಕೆ. ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎA. ಗಣೇಶಾಚಾರಿ, ಖಜಾಂಚಿಯಾಗಿ ಎನ್.ಬಿ. ಕಿಶೋರ್, ಸಮಿತಿಯ ಸದಸ್ಯರುಗಳನ್ನಾಗಿ ಎನ್.ಬಿ. ಮಾಚಯ್ಯ, ಎಸ್. ಆನಂದ್, ಹೆಚ್.ಎಸ್. ಆಕರ್ಶ್, ಜಿ. ಸುನಿಲ್ ಕುಮಾರ್, ಹೇಮಂತ್, ಪೆರೇರ, ಸೀತಾ, ಹರೀಶ್ ಕುಮಾರ್, ಎಸ್.ಎಸ್. ದೊಡ್ಡಯ್ಯ ಹಾಗೂ ಗೌರವಾಧ್ಯಕ್ಷರನ್ನಾಗಿ ಹೆಚ್.ಬಿ. ಲಿಂಗಮೂರ್ತಿ ಅವರುಗಳನ್ನು ಆಯ್ಕೆ ಮಾಡಲಾಯಿತು.