ಮಡಿಕೇರಿ, ಏ. ೧೫: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ನರಿಯಂದಡ ಶ್ರೀ ಭಗವತಿ, ವಿಷ್ಣುಮೂರ್ತಿ ಮತ್ತು ಕ್ಷೇತ್ರಪಾಲ ದೇವರ ವಾರ್ಷಿಕ ಉತ್ಸವವನ್ನು ತಾ. ೧೭, ೧೮, ೧೯, ೨೦ ಹಾಗೂ ೨೧ ರಂದು ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ

ತಾ. ೧೭ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಾಗಣಪತಿ ಹೋಮ, ನಂತರ ಪ್ರಸಾದ ವಿತರಣೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಮತ್ತು ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ಬರುವುದು, ಕೊಡಿ ಮರ ನಿಲ್ಲಿಸುವುದು, ದೇವಸ್ಥಾನಕ್ಕೆ ೩ ಸುತ್ತು ಬಲಿ ಬರುವುದು. ಅಂದಿ ಬೆಳಕು, ನಂತರ ಮಹಾಪೂಜೆ ಹಾಗೂ ಅನ್ನ ಪ್ರಸಾದ ವಿತರಣೆ ಜರುಗಲಿದೆ.

ತಾ. ೧೮ ರಂದು ಬೆಳಿಗ್ಗೆ ೭ ಗಂಟೆಗೆ ಇರು ಬೆಳಕು (ದೇವರು ಹೊರಗೆ ಬರುವುದು) ನಂತರ ಬೆಳಗಿನ ಉಪಹಾರದ ವ್ಯವಸ್ಥೆ ಇದೆ. ಬೆಳಿಗ್ಗೆ ೧೦ ಗಂಟೆಗೆ ಚಂಡಿಕಾ ಹೋಮ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಂತರ ಮಧ್ಯಾಹ್ನದ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ ನೆರಪು ಬಲಿ, ದೇವರ ನೃತ್ಯ ನಂತರ ರಾತ್ರಿ ಮಹಾಪೂಜೆ ನೆರವೇರಲಿದೆ.

ತಾ.೧೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಎತ್ತು ಪೋರಾಟ, ನಂತರ ಅಲಂಕಾರ ಪೂಜೆ, ನಂತರ ಮಧ್ಯಾಹ್ನದ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಇರುತ್ತದೆ. ಸಂಜೆ ೪ ಗಂಟೆಗೆ ಶ್ರೀ ಭಗವತಿ ದೇವರ ಅವಭೃತ ಸ್ನಾನ (ಹೊಳೆಗೆ ಹೋಗುವುದು) ಸಂಜೆ ೬ ಗಂಟೆಗೆ ದೇವರ ನೃತ್ಯ, ವಸಂತ ಪೂಜೆ ನಂತರ ಮಹಾಪೂಜೆ ನಡೆಯುವುದು. ರಾತ್ರಿ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಇರುತ್ತದೆ.

ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಯ ನಂತರ ವಿಷ್ಣುಮೂರ್ತಿ ಮೇಲೇರಿಗೆ ಸೌದೆ ಕಡಿಯುವುದು, ಶ್ರೀ ಭಗವತಿ ದೇವರ ಸನ್ನಿಧಿಯಲ್ಲಿ ಕಲಶ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಇರಲಿದೆ. ಸಂಜೆ ೫ ಗಂಟೆಗೆ ಕ್ಷೇತ್ರಪಾಲ ಕೋಲವು ಕ್ಷೇತ್ರಪಾಲ ಸನ್ನಿಧಿಯಲ್ಲಿ ನಡೆಯಲಿದೆ. ರಾತ್ರಿ ೯ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲಗಳು ನಡೆಯಲಿವೆ.

ತಾ. ೨೧ ರಂದು ಬೆಳಿಗ್ಗೆ ೧೦ ಗಂಟೆಗೆ ವಿಷ್ಣುಮೂರ್ತಿ ಕೋಲವು ನಡೆಯಲಿದೆ. ನಂತರ ಮಧ್ಯಾಹ್ನದ ಅನ್ನಸಂತರ್ಪಣೆ, ಸಂಜೆ ೭ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಪ್ರಸಾದ ವಿತರಣೆ (ಭಾರಣಿ) ನಡೆಯಲಿದೆ.