ಚೆಯ್ಯಂಡಾಣೆ, ಏ. ೧೫: ಕಕ್ಕಬ್ಬೆ ಸಮೀಪದ ವಯಕೋಲ್ ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪುಳಿಙೆÆÃಂ ಔಲಿಯಾಗಳ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸುವ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಮಗ್ರಿಬ್ ನಮಾಜ್ ಬಳಿಕ ವಯಕೋಲ್ ಮಸ್ಜಿದುರ್ರಹ್ಮಾನ್ ಅಧ್ಯಕ್ಷ ಅಹ್ಮದ್ ಹಾಜಿ ವಿ.ಎ. ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್‌ಗೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮವನ್ನು ಸದರ್ ಮುಹಲ್ಲಿಂ ಅಬ್ದುಲ್ ನಾಸರ್ ಲತೀಫಿ ಉದ್ಘಾಟಿಸಿ ಮಾತನಾಡಿದರು.
ಫೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ವಯಕೋಲ್ ಮಸೀದಿಯಾ ಇಮಾಮರಾದ ರಫೀಕ್ ಸಖಾಫಿ ಅಲ್ ಅಝರಿ ಉದ್ಘಾಟಿಸಿದರು.
ಪ್ರಖ್ಯಾತ ವಾಗ್ಮಿ ಮೊಹಮ್ಮದ್ ರಾಫಿ ಹಿಮಮಿ ಖಾಮಿಲ್ ಸಖಾಫಿ ಧಾರ್ಮಿಕ ಪ್ರವಚನ ನಡೆಸಿದರು.
ಪ್ರಾರ್ಥನೆಗೆ ಪೈನರಿ ಮುಸ್ಲಿಂ ಜಮಾಅತ್ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ನೇತೃತ್ವ ನೀಡಿದರು. ಮಸೀದಿಯಲ್ಲಿ ಮೌಲೂದ್ ಪಾರಾಯಣ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ವಯಕೋಲ್ ಮಸೀದಿಯ ಅಧ್ಯಕ್ಷ ಅಹ್ಮದ್ ಹಾಜಿ, ಉಪಾಧ್ಯಕ್ಷ ಮೊಯ್ದು, ಕೋಶಾಧಿಕಾರಿ ಉಸ್ಮಾನ್, ಪೈನರಿ ಮಸೀದಿಯ ಕಾರ್ಯದರ್ಶಿ ಸಹಿದ್ ಪಯ್ಯಡತ್, ಹುಸೇನ್ ಮುಸ್ಲಿಯರ್, ನಿವೃತ್ತ ಪೊಲೀಸ್ ಅಧಿಕಾರಿ ಮೂಸ, ವಯಕೋಲ್ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತಿತರರು, ಉಪಸ್ಥಿತರಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬು ವಿ.ಎ. ಸ್ವಾಗತಿಸಿ, ಉಸ್ಮಾನ್ ವಿ.ಎಂ. ವಂದಿಸಿದರು.