ಸಿದ್ದಾಪುರ, ಏ. ೧೫: ಸಿದ್ದಾಪುರ ಸಮೀಪದ ಕರಡಿಗೋಡು ಟೀಕ್‌ವುಡ್ ಎಸ್ಟೇಟ್‌ನ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವ ತಾ ೧೯ ರಂದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ತಾ. ೧೯ ರಂದು ಬೆಳಿಗ್ಗೆ ೬ಕ್ಕೆ ಗಣಪತಿ ಹೋಮ, ೯ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ೧ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ಕ್ಕೆ ತಯಂಬಕ ನೃತ್ಯ ಕೇರಳದ ಚೆಂಡೆ ವಾದ್ಯ, ರಾತ್ರಿ ೭:೩೦ ರಿಂದ ಸಿದ್ದಾಪುರದ ಭಾರತೀಯ ನೃತ್ಯ ಶಾಲೆಯ ಮಕ್ಕಳಿಂದ ಭರತನಾಟ್ಯ, ರಾತ್ರಿ ೯ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ, ನಂತರ ಮಹಾಮಂಗಳಾರತಿ ಅನ್ನ ಸಂತರ್ಪಣೆ ನಡೆಯಲಿದೆ.