ಮಡಿಕೇರಿ, ಏ. ೧೪: ರಸಗೊಬ್ಬರ ಅದರಲ್ಲೂ ಯೂರಿಯಾ ಖರೀದಿ ಮಾಡಲು ರೈತರು ಕಡ್ಡಾಯವಾಗಿ ಎಫ್‌ಐಡಿ ಕಡ್ಡಾಯವಾಗಿದೆ. ತಮ್ಮ ಜಮೀನನ್ನು ಆಧಾರ್ ಜೋಡಣೆಯೊಂದಿಗೆ ಎಫ್‌ಐಡಿ ಮಾಡಿಸಿಕೊಂಡಿದ್ದರೆ ರಸಗೊಬ್ಬರ ಸೇರಿದಂತೆ ಕೃಷಿ, ಕೃಷಿ ಸಂಬAಧಿತ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಕೃಷಿಗೆ ಸಂಬAಬAಧಿತ ಸಾಲಸೌಲಭ್ಯ ಸೇರಿದಂತೆ ಯಾವದೇ ಸವಲತ್ತುಗಳು ಹಾಗೂ ಸರಕಾರದಿಂದ ದೊರಕುವ ಸೌಲಭ್ಯದ ವಿನಾಯಿತಿ ಪಡೆದುಕೊಳ್ಳಲು ಎಫ್‌ಐಡಿ ಮಾಡಿಸಿಕೊಳ್ಳುವ ನಿಯಮ ಈ ಹಿಂದೆಯೇ ಜಾರಿಯಲ್ಲಿತ್ತು. ಆದರೆ ಇದುವರೆಗೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಕೊಲ್ಲಿರಾಷ್ಟçಗಳ ಯುದ್ಧದಿಂದಾಗಿ ರಸಗೊಬ್ಬರ ಕಚ್ಚಾವಸ್ತು ಆಮದಿನಲ್ಲಿ ಸಮಸ್ಯೆ ಎದುರಾಗಬಹುದೆಂಬ ಕಾರಣಕ್ಕಾಗಿ ಕಡ್ಡಾಯ ಮಾಡಲಾಗಿದೆ. ಅದೂ ಅಲ್ಲದೆ ಯೂರಿಯಾ ಗೊಬ್ಬರವನ್ನು ಇತರ ಚರ್ಮಗಾರಿಕೆ, ಸಕ್ಕರೆ ಸೇರಿದಂತೆ ಇತರ ಉದ್ಯಮಗಳಲ್ಲಿ ಹೆಚ್ಚಿಗೆ ಬಳಕೆ ಮಾಡುತ್ತಿರುವದರಿಂದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವದನ್ನು ತಡೆಗಟ್ಟುವ ಸಲುವಾಗಿ ಎಫ್‌ಐಡಿ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟನಿಟ್ಟಿನ ಸೂಚನೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡಬೇಕು ಎಂದಾದರೆ ಮೊದಲು ಎಫ್‌ಐಡಿ ಹೊಂದುವದು ಕಡ್ಡಾಯ. ಅದಾದ ನಂತರ ಎಫ್‌ಐಡಿಗೆ ರೈತರು ತಮ್ಮ ಭೂಮಿಯನ್ನೆಲ್ಲ ಕಡ್ಡಾಯವಾಗಿ ಜೋಡಿಸಬೇಕು, ಇದರ ಆಧಾರದ ಮೇಲೆ ಹಾಕಿದ ಬೆಳೆಗೆ ರಸಗೊಬ್ಬರವನ್ನು ರೈತರಿಗೆ ಕೆ-ಕಿಸಾನ್ ತಂತ್ರಜ್ಞಾನದ ಮೂಲಕ ವಿತರಣೆ ಮಾಡಲಾಗುತ್ತದೆ. ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ದಂಧೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವುದು ಮತ್ತು ರೈತರು ಮಿತವ್ಯಯವಾಗಿ ರಸಗೊಬ್ಬರ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕಾಗಿ ಕೆ-ಕಿಸಾನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ರೈತರ ಭೂಮಿ, ಹಾಕಿದ ಬೆಳೆಯ ಆಧಾರದಲ್ಲಿ ಬೇಕಾಗುವ ಪ್ರಮಾಣದ ರಸಗೊಬ್ಬರ ಮಾತ್ರ ಕೆ-ಕಿಸಾನ್ ತಂತ್ರಜ್ಞಾನದ ಮೂಲಕ ವಿತರಣೆ ಮಾಡಲಾಗುತ್ತದೆ.

ರೈತರು ಈಗಾಗಲೇ ಎಫ್‌ಐಡಿ ಹೊಂದಿದಲ್ಲಿ ಅಥವಾ ಹೊಂದಿರÀದೇ ಇದ್ದಲ್ಲಿ ತಮ್ಮ ಎಲ್ಲಾ ಪಹಣಿ ಹಾಗೂ ಆಧಾರ್ ಕಾರ್ಡ್ನೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಬೇಕು. ಎಫ್‌ಐಡಿ ಹೊಂದಿದಲ್ಲಿ ಎಲ್ಲಾ ಸರ್ವೇ ನಂಬರ್ ಆ ಎಫ್‌ಐಡಿಗೆ ಲಿಂಕ್ ಮಾಡಿಸಿಕೊಳ್ಳಲು ಹಾಗೂ ಎಫ್‌ಐಡಿ ಹೊಂದಿರÀೆÃ ಇದ್ದಲ್ಲಿ ಹೊಸದಾಗಿ ಎಫ್‌ಐಡಿ ಸೃಜಿಸಿಕೊಳ್ಳಬೇಕು. (ಸೃಜಿಸಿಕೊಳ್ಳಲು ಅಗತ್ಯ ದಾಖಲಾತಿಗಳೊಂದಿಗೆ ಕೇಂದ್ರ ಸಂಪರ್ಕಿಸಬೇಕು)

ಮಾರಾಟದ ಮೇಲೆ ನಿಯಂತ್ರಣ

ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾAಶದ ಮೂಲಕ ರೈತರ ಎಫ್‌ಐಡಿ ನಮೂದಿಸಿ ಮಾರಾಟ ಮಾಡಬೇಕು. ತಮ್ಮ ಎಲ್ಲಾ ಓ ಫಾರಂ ನವೀಕರಣಗೊಳಿಸಬೇಕು. ಒಂದು ವೇಳೆ ಮಾರಾಟ ಮಾಡಿದಲ್ಲಿ ಹಾಗೂ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬAದಲ್ಲಿ ಪರವಾನಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಮಾನತು ಅಥವಾ ರದ್ದು ಮಾಡುವದಾಗಿ ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರತ್ಯೇಕ ಸಾಫ್ಟವೇರ್

ಇದಕ್ಕಾಗಿ ಪ್ರತ್ಯೇಕ ಸಾಪ್ಟ್ವೇರ್ ಸಹ ಮಾಡಲಾಗಿದ್ದು, ಪ್ರತಿಯೊಂದರ ಮೇಲೆಯೂ ನಿಗಾ ಇರಿಸಲಾಗುತ್ತದೆ. ವಿತರಣೆಯಾದ ರಸಗೊಬ್ಬರ ಯಾರಿಗೆ ವಿತರಣೆಯಾಗಿದೆ ಮತ್ತು ಬಳಕೆಯಾಗಿದೆ ಎನ್ನುವುದನ್ನು ಪರಾಮರ್ಶೆ ಮಾಡಲಾಗುತ್ತದೆ.

ಕಟ್ಟುನಿಟ್ಟಿನ ಸೂಚನೆ

ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುವ ರಸಗೊಬ್ಬರ ವಿತರಣೆಯಾಗಿರುವ ಧೃಡೀಕರಣವನ್ನಾಧರಿಸಿ ರಾಜ್ಯಕ್ಕೆ ಹಂತಹAತವಾಗಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರದ ಎಫ್‌ಐಡಿ ಕಡ್ಡಾಯ ಮಾಡಿ ಆದೇಶ ನೀಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕÀ ಚಂದ್ರಶೇಖರ ತಿಳಿಸಿದ್ದಾರೆ.