ಕೂಡಿಗೆ, ಏ. ೧೫: ಸೋಮವಾರಪೇಟೆ ತಾಲೂಕು ವಲಯ ಅರಣ್ಯ ಇಲಾಖೆ, ಹೆಬ್ಬಾಲೆ ಉಪವಲಯ ಅರಣ್ಯ ಇಲಾಖೆ ವತಿಯಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಣ ಮತ್ತು ಕಾಡ್ಗಿಚ್ಚು ತಡೆಗಟ್ಟುವ ಕುರಿತು ಅರಣ್ಯದಂಚಿನ ಗ್ರಾಮಸ್ಥರೊಂದಿಗೆ ಸಮಾಲೋಚನೆ ಸಭೆ ಉಪಅರಣ್ಯಾಧಿಕಾರಿ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಚಿನ್ನೇನಹಳ್ಳಿಯ ಗ್ರಾಮದಲ್ಲಿ ನಡೆಯಿತು.
ಮಾನವ ಅರಣ್ಯ ಪ್ರದೇಶದ ಪ್ರಾಣಿಗಳಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ, ಪರಿಸರ ಸಂರಕ್ಷಣೆಯಲ್ಲಿ ವನ್ಯಜೀವಿಗಳ ಪ್ರಾಮುಖ್ಯತೆ, ಸೇರಿದಂತೆ ವಿವಿಧ ಹಂತದ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿ ಗೋವಿಂದ ರಾಜ್ ನೀಡಿದರು.
ಸಭೆಯಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ಪೂನ್ನಮ್ಮ, ಗ್ರಾಮದ ಪ್ರಮುಖರಾದ ದೇವರಾಜ್, ಸಂಯೋಜಕರಾದ ಸುನಂದ ಕುಮಾರ್, ಗೋವಿಂದರಾಜ್, ಮಹಿಳಾ ಸಂಘದ ಸದಸ್ಯರು, ಹಾಡಿ ಮುಖ್ಯಸ್ಥರು ಸೇರಿದಂತೆ ಇನ್ನಿತರರು ಹಾಜರಿದ್ದರು.