ಮಡಿಕೇರಿ, ಏ. ೧೪: ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಕೊಡಗು ಜಿಲ್ಲೆಯ ಕೆದಂಬಾಡಿ ಶಾಂತಿ ಗಣೇಶ್ ನೇಮಕಗೊಂಡಿದ್ದಾರೆ.

ಜಿಲ್ಲೆಯ ಸುಂಟಿಕೊಪ್ಪದ ನಿವಾಸಿಯಾಗಿರುವ ಇವರು ಈ ಹಿಂದೆ ಸಿವಿಲ್ ಜಡ್ಜ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿದ್ದರು.

ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಇವರು ಮಡಿಕೇರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಅವರ ಶಿಷ್ಯೆಯಾಗಿ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದರು.