ಮೂಲತಃ ಬಾಡಗರಕೇರಿ ನಿವಾಸಿ, ಮಡಿಕೇರಿಯ ರಾಜಾಸೀಟ್ ಬಳಿ ನೆಲೆಸಿದ್ದ, ಜಿಲ್ಲಾಸ್ಪತ್ರೆಯಲ್ಲಿ ಲೇ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸಿದ್ದ ಕಾಯಪಂಡ ಎಂ. ಗಣೇಶ್ ಉತ್ತಪ್ಪ (೭೮) ತಾ. ೧೪ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೫ ರಂದು (ಇಂದು) ಅಪರಾಹ್ನ ಮಡಿಕೇರಿ ಕೊಡವ ಸಮಾಜ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

* ಬೀರುಗ ಗ್ರಾಮದ ನಿವಾಸಿ ತಿರೋಡಿರ ಸೋಮಯ್ಯ (೮೭) ತಾ. ೧೨ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೫ ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.

* ಮೂಲತಃ ಜಿಲ್ಲೆಯ ಚೇರಂಗಾಲ ಗ್ರಾಮ ನಿವಾಸಿ, ಹುಣಸೂರಿನಲ್ಲಿ ನೆಲೆಸಿದ್ದ ದಿ. ಕುದನೆಕೋಡಿ ಪೂವಯ್ಯ ಅವರ ಪತ್ನಿ ಬೆಳ್ಳಿಯಮ್ಮ (೮೮) ರವರು ತಾ. ೧೪ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೫ ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಹುಣಸೂರಿನಲ್ಲಿ ನಡೆಯಲಿದೆ. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.

*ವೀರಾಜಪೇಟೆ ಕೊಟ್ಟೋಳಿ ಗ್ರಾಮ ನಿವಾಸಿ ರಾಮ ಭಟ್ ಅವರ ಪತ್ನಿ ವಿಜಯಕುಮಾರಿ (೬೩) ತಾ. ೧೪ ರಂದು ನಿಧನರಾದರು. ಪುತ್ರಿ, ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೬ ರಂದು ವೀರಾಜಪೇಟೆಯ ಅರಸು ನಗರದ ರುದ್ರಭೂಮಿಯಲ್ಲಿ ಬೆಳಿಗ್ಗೆ ೮ ಗಂಟೆಗೆ ನಡೆಯಲಿದೆ.