ಆ
ಸುಂಟಿಕೊಪ್ಪ, ಏ. ೧೪: ಹರದೂರು ಗ್ರಾಮದ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಆದಿನಾಗಬ್ರಹ್ಮ ಮೊಗೇರ ದೈವಗಳ ಹಾಗೂ ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿಗನ ೮೬ನೇ ನೇಮೋತ್ಸವ ಶ್ರದ್ಧಾಭಕ್ತಿಯಿಂದÀ ಸಂಪನ್ನಗೊAಡಿತು.
ತಾ. ೩ ರಂದು ಬೆಳಿಗ್ಗೆ ಗೊನೆ ಕಡಿಯುವ ಮೂಲಕ ಧ್ವಜಾರೋಹಣವನ್ನು ನಡೆಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೯ ರ ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ತಾ. ೧೧ ರಂದು ೧೨ ಗಂಟೆಗೆ ಆಯುಧಪೂಜೆ, ಸಂಜೆ ೫ ಗಂಟೆಗೆ ನಿತ್ಯ ಪೂಜೆ ಮತ್ತು ಭಂಡಾರ ಹೊರಡುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು. ಸಂಜೆ ೬ ಗಂಟೆಯ ನಂತರ ಮಂತ್ರವಾದಿ ಗುಳಿಗನ ನೇಮ ನಡೆಯಿತು. ರಾತ್ರಿ ೮.೩೦ ಗಂಟೆಗೆ ಆದಿನಾಗಬ್ರಹ್ಮ ಮೊಗೇರ ದೈವಗಳ ಆದಿಮಾಯೆ ತನ್ನಿಮಾನಿಗ ಗರಡಿ ಇಳಿಯಿತು.
ಮುಂದಿನ ಬೆಳಿಗ್ಗೆ ೯ ಗಂಟೆಯ ಕೊರಗ ತನಿಯ ದೈವದ ಕಾರಣಿಕ ನೇಮೋತ್ಸವವು ನಡೆಯಿತು.
ನಂತರ ಗಂಧಪ್ರಸಾದ ವಿತರಿಸಲಾಯಿತು. ರಾತ್ರಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆದವು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಿ ರಾಜು, ಉಪಾಧ್ಯಕ್ಷ ಬಿ.ಎಸ್ ಆನಂದ, ಕಾರ್ಯದರ್ಶಿ ಎನ್.ಎಸ್ ನವೀನ, ಖಜಾಂಚಿ ಅಣ್ಣಿ, ಸಮಿತಿ ಪದಾಧಿಕಾರಿಗಳಾದ ಎಂ.ಪಿ ದೇವಪ್ಪ, ಗೌತಮ್ ಶಿವಪ್ಪ, ದಿನೇಶ್, ದೇವಾಲಯದ ಪ್ರಧಾನÀ ಪೂಜಾರಿಗಳಾದ ಯೋಗೆಂದ್ರ, ಮಂಜು, ಸತೀಶ, ರವಿ, ಪಿ.ಕೆ ಸುಂದರ, ಮೊಣ್ಣಪ್ಪ ಪೂಜಾರಿ ಊರಿನ ಗಣ್ಯರು, ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕುಶಾಲನಗರ, ಮೈಸೂರು, ಮಂಗಳೂರು, ಸುಳ್ಯ, ಪುತ್ತೂರು, ಹಾಸನ, ಚಿಕ್ಕಮಗಳೂರು, ಸಕಲೇಶಪುರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನೇಮೋತ್ಸವ ವೀಕ್ಷಿಸಿದರು.