ಸೋಮವಾರಪೇಟೆ,ಏ.೧೩: ಮಾರುತಿ ಓಮ್ನಿ ಹಾಗೂ ಕಾರಿನ ನಡುವೆ ಶಾಂತಳ್ಳಿ-ಹರಗ ರಸ್ತೆಯ ಗುಡ್ಡಳ್ಳಿ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟ ವಶಾತ್ ಸವಾರರು ಅಪಾಯ ದಿಂದ ಪಾರಾಗಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಮಾರುತಿ ಓಮ್ನಿಯ ಮುಂಭಾಗ ನಜ್ಜುಗುಜ್ಜಾಗಿದೆ. ಎದುರು ಭಾಗದ ಕಾರಿನ ಮುಂಭಾಗವೂ ಜಖಂಗೊAಡಿದೆ. ಮಾರುತಿ ಓಮ್ನಿಯಲ್ಲಿದ್ದ ಹೆಗ್ಗಡಮನೆ ಗ್ರಾಮ ಸಚಿನ್ ಅವರ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.