ಕರಿಕೆ, ಏ. ೧೩: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸುದ್ದಿ ಮಾಡಿದ ಸೋಮವಾರಪೇಟೆ ಕಾಜೂರು ಮೀಸಲು ಅರಣ್ಯದಿಂದ ಮರ ಕಳವು ಪ್ರಕರಣ ಹಾಗೂ ಮಾದಾಪುರ ಶಾಖೆಯಲ್ಲಿನ ಅಕ್ರಮ ಮರ ಕಡಿತಲೆಗೆ ಸಂಬAಧಿಸಿದAತೆ ಇದೀಗ ಮತ್ತೊಂದು ಹೊಸ ಬೆಳವಣಿಗೆ ನಡೆದಿದ್ದು, ಪ್ರಕರಣಕ್ಕೆ ಸಂಬAಧಪಟ್ಟAತೆ ಅರಣ್ಯ ಸಚಿವರಿಗೆ ದೂರು ಬಂದ ಹಿನ್ನಲೆಯಲ್ಲಿ, ಅರಣ್ಯ ಸಚಿವರ ಆದೇಶದಂತೆ ಅರಣ್ಯ ಇಲಾಖೆ ವಿಶೇಷ ತನಿಖಾ ತಂಡ (SIಖಿ) ರಚನೆ ಮಾಡಿ, ತನಿಖೆ ನಡೆಸಿದ ಸಂದರ್ಭ ಮತ್ತೊಂದು ಪ್ರಕರಣ ಬಯಲಾಗಿದ್ದು ರಕ್ಷಿತಾರಣ್ಯ ಮಾದಾಪುರ ಶಾಖೆಯ ಮರ ಕಳವು ಸಂಬAಧ ಪ್ರಕರಣ ದಾಖಲಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕರ್ತವ್ಯ ಲೋಪ ಹಾಗು ಮರಗಳ್ಳತನದಲ್ಲಿ ಭಾಗಿಯಾದ ಆರೋಪದಡಿಯಲ್ಲಿ ಮೂವರು ಅರಣ್ಯ ಇಲಾಖೆಯವರು ಸೇರಿದಂತೆ ೭ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಮವಾರಪೇಟೆ ವಲಯ ಉಪ ಅರಣ್ಯಾಧಿಕಾರಿ ಉಲ್ಲಾಸ್ ಪ್ರಕಾಶ್ ಮಾದರ್, ಅರಣ್ಯ ವೀಕ್ಷಕರುಗಳಾದ ಕೆ.ಎ. ಅಂತೋಣಿ, ವೈ.ಎಲ್. ಚಂದ್ರಶೇಖರ್ ಇವರುಗಳ ಮೇಲೆ ಹಾಗೂ ಸೋಮವಾರಪೇಟೆಯ ಕೆ.ಆರ್. ದಯಾನಂದ ಗೌಡ, ರವಿಚಂದ್ರ, ಕಾಜೂರಿನ ಜಿ. ಮುರುಘ, ಸುಂಟಿಕೊಪ್ಪ ಹೊಸತೋಟದ ಕೆ.ಕೆ. ಪ್ರಕಾಶ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಜಾರಿಗೊಳಿಸಲು ಕ್ರಮವಹಿಸುವುದಾಗಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಭಿಷೇಕ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಸರಕಾರಿ ಸ್ವತ್ತನ್ನು ಮಾರಾಟ ಮಾಡಿದ ಮತ್ತು ಅದಕ್ಕೆ ಸಹಕಾರ ನೀಡಿದ ಸಿಬ್ಬಂದಿಗಳ ಮೇಲೆ ಅರಣ್ಯ ಇಲಾಖೆಯ ಅರಣ್ಯ ಸಂಚಾರಿ ದಳ ಮತ್ತು ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿರುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ತಿಳಿಸಿದ್ದಾರೆ. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ)

ತನಿಖಾಧಿಕಾರಿ ವರ್ಗಾವಣೆ

ಒಂದೆಡೆ ಅರಣ್ಯವನ್ನು ಕಾಯಬೇಕಾದ ಸಿಬ್ಬಂದಿಗಳು ಮರ ಕಳ್ಳತನದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದು, ಸ್ವತಃ ಅರಣ್ಯ ಸಿಬ್ಬಂದಿಗಳ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ ಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಆ ಭಾಗದ ಪ್ರಭಾವಿ ಜನಪ್ರತಿದಿನಿüಯೊಬ್ಬರ ಒತ್ತಡಕ್ಕೆ ಮಣಿದ ಸರಕಾರ ವಿಶೇಷ ತನಿಖಾ ತಂಡದ ತನಿಖಾ ಅಧಿಕಾರಿ ಹಾಗೂ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾದ ಗಾನಶ್ರೀ ಅವರನ್ನು ದಿಢೀರ್ ವರ್ಗಾವಣೆ ಮಾಡಿದೆ. ಅಲ್ಲದೆ ಗಾನಶ್ರೀ ಅವರಿಗೆ ಇನ್ನೂ ಸ್ಥಳ ತೋರಿಸದೆ ಹಾಗೂ ಅವರ ಹುದ್ದೆಗೆ ಬದಲಿ ಅಧಿಕಾರಿ ನಿಯೋಜನೆ ಮಾಡದೇ ಇಲಾಖೆ ಪೇಚಿಗೆ ಸಿಲುಕಿದೆ. ಇದರಿಂದ ಈ ತನಿಖೆ ಹಳ್ಳ ಹಿಡಿಯುವ ಸಾಧ್ಯತೆ ಇದ್ದು, ಈ ಬಗ್ಗೆ ಬದಲಿ ಅಧಿಕಾರಿ ಬರುವವರೆಗೆ ವರ್ಗಾವಣೆಗೊಂಡ ಅಧಿಕಾರಿಯನ್ನೆ ಮುಂದುವರೆಸಲು ಸರಕಾರಕ್ಕೆ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸೋನಾಲ್ ವೃಷ್ಣಿ ಪತ್ರ ಬರೆದಿದ್ದು, ಸರಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ಮರಗಳ್ಳತನ ಪ್ರಕರಣದಲ್ಲಿ ತನಿಖಾ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಯಾಕೆ? ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಸುಗುಸು ಶುರುವಾಗಿದ್ದು, ಸರಿಯಾದ ತನಿಖೆಯಿಂದ ಸತ್ಯ ಹೊರಬರಬೇಕಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಬಗ್ಗೆ ಸೂಕ್ತ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕ ವಲಯದ ಆಶಯವಾಗಿದೆ. - ಸುಧೀರ್ ಹೊದ್ದೆಟ್ಟಿ