ಗುಡ್ಡೆಹೊಸೂರು, ಏ. ೧೩: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕೋತ್ಸವ ತಾ.೧೩ ಮತ್ತು ಮತ್ತು ತಾ.೧೪ ರಂದು ನಡೆಯಲಿದೆ.
ತಾ.೧೩ ಸೋಮವಾರ ಸಂಜೆ ೪ ಗಂಟೆಯಿAದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು(ಶ್ರೀ ತೊಂಟ ದಾರ್ಯ ಸಂಸ್ಥಾನ ಮಠ ಬಸವಪಟ್ಟಣ)ಇವರ ಸಾನಿಧ್ಯದಲ್ಲಿ ಗಂಗಾ ಪೂಜೆ ಮತ್ತು ಕಳಸಪೂಜೆಯೊಂದಿಗೆ ಉತ್ಸವ ಶುಭಾರಂಭಗೊಳ್ಳಲಿದೆ.
ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್ ಪೂರ್ಣಿಮ ಶಿವಕುಮಾರ್ ಅವರ ಮನೆಯಿಂದ ಭಂಡಾರ ದೇವಸ್ಥಾನಕ್ಕೆ ತರಲಾಗುವುದು. ನಂತರ ಶ್ರೀ ದೇವರುಗಳಿಗೆ ಮಹಾರುದ್ರಾಭಿಷೇಕ, ಅಲಂಕಾರ ನಡೆಯಲಿದೆ. ತಾ.೧೪ರ ಮಂಗಳವಾರ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮಿಗಳ ಸಾನಿಧ್ಯದಲ್ಲಿ ಮೈಸೂರಿನ ವೇದಮೂರ್ತಿ ದಿನೇಶ್ ಶಾಸ್ತಿçಗಳು ದೇವಸ್ಥಾನದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಲಿದ್ದಾರೆ.
ಬೆಳಿಗ್ಗೆ ೯.೩೦ ಗಂಟೆಯಿAದ ಉದ್ದುರು ರವಿಕುಮಾರ್ ತಂಡದಿAದ ವೀರಗಾಸೆ ಕುಣಿತ ನಡೆಯಲಿದೆ. ಬೆಳಿಗ್ಗೆ ೧೧.೩೦ ಗಂಟೆಯಿAದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀ ಕಳಂಚೇರಿ ಮಠ ಮತ್ತು ಶ್ರೀ ಸ್ವತಂತ್ರ್ಯ ಬಸವಲಿಂಗ ಶಿವಯೋಗಿಗಳ ಸಾನಿಧ್ಯದಲ್ಲಿ ಕೆಂಡ ಕೊಂಡ ಪೂಜೆ ನಡೆಯಲಿದೆ. ಲೊಕ ಕಲ್ಯಾಣಾರ್ಥ ೨ ಗಂಟೆಯಿAದ ಅನ್ನಸಂತರ್ಪಣೆ ನಡೆಯಲಿದೆ.