ಮಡಿಕೇರಿ, ಏ. ೧೩: ಸಮುದ್ರದಲ್ಲಿ ಹಡಗು ನಿಂತು ಹೋದ ಪರಿಸ್ಥಿತಿಯಂತಿದೆ ಪ್ರಸ್ತುತದ ಕಾಫಿ ವಹಿವಾಟು ಹಾಗೂ ಕಾಫಿ ಧಾರಣೆ. ಕಾಫಿ ಪ್ರಸಕ್ತ ವರ್ಷ ಹಲವಾರು ಕಾರಣಗಳಿಂದಾಗಿ ಏರಿಕೆ ಕಾಣದೆ ಇನ್ನೂ ಬೆಳೆಗಾರರು ಅನಿಶ್ಚಿತತೆಯಲ್ಲೇ ಇದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಧಾರಣೆ ತೀರಾ ಕಡಿಮೆಯಾಗಿರುವುದು ಆತಂಕಕಾರಿಯಾಗಿದೆ.

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಕಾಫಿ ವಹಿವಾಟಿಗೆ ಧಕ್ಕೆಯಾಗಿರುವುದೂ ಒಂದು ಅಂಶವಾಗಿದೆ. ಆದರೆ, ಕೇವಲ ಯುದ್ಧವೊಂದೇ ಇದಕ್ಕೆ ಕಾರಣವಲ್ಲ ಎಂಬುದು ತಜ್ಞರ ಹಾಗೂ ಅನುಭವಸ್ಥರ ಅಭಿಪ್ರಾಯವಾಗಿದೆ. ಪ್ರಸ್ತುತ ರಫ್ತು ಕೂಡ ಸಮಸ್ಯೆಯಂತಾಗಿದೆ. ಜೊತೆಗೆ ಭಾರತದ ಕಾಫಿಯನ್ನು ಆಮದು ಮಾಡಿಕೊಳ್ಳಲು ಅಂತರರಾಷ್ಟಿçÃಯವಾಗಿ ಹೆಚ್ಚು ಖರೀದಿದಾರರು ಮುಂದಾಗುತ್ತಿಲ್ಲ. ರಫ್ತುದಾರರಿಗೆ ನಿರೀಕ್ಷಿತ ಬೇಡಿಕೆಯೂ ಲಭ್ಯವಾಗುತ್ತಿಲ್ಲ.

ಇದರೊಂದಿಗೆ ಬ್ರೆಜಿಲ್, ಇಂಡೋನೇಷಿಯಾ, ಯೂರೋಪ್‌ನಂತಹ ಕಾಫಿ ಉತ್ಪಾದಿಸುವ ರಾಷ್ಟçಗಳಿಂದಲೂ ಕಾಫಿ ಆಂತರರಾಷ್ಟಿçÃಯ ಮಾರುಕಟ್ಟೆಗೆ ಬರುತ್ತಿವೆ. ಮುಂದಿನ ತಿಂಗಳು ಉಗಾಂಡದಿAದಲೂ ರೋಬೊಸ್ಟಾ ಕಾಫಿ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಬೇರೆ ರಾಷ್ಟçಗಳಿಗೆ ಹೋಲಿಸಿದರೆ ಭಾರತೀಯ ಕಾಫಿಯ ಧಾರಣೆ ಒಂದಷ್ಟು ಹೆಚ್ಚೇ ಇದೆ ಎಂಬ ಕಾರಣದಿಂದ ಖರೀದಿದಾರರು ಇತರ ರಾಷ್ಟçಗಳಿಂದ ಬರುತ್ತಿರುವ ಕಾಫಿಯತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಇ.ಪಿ. ದರ (ಎಸ್ಟೇಟ್ ಪೌಂಡ್) ಸರಿಸುಮಾರು ರೂ. ೫೦೦ರ ತನಕ ತಲುಪಿತ್ತು. ಔಟ್‌ಟರ್ನ್ ಆಧಾರದಲ್ಲಿ ಬೆಳೆಗಾರರಿಗೆ ಒಂದಷ್ಟು ಉತ್ತಮ ದರವೂ ಲಭ್ಯವಾಗಿತ್ತು. ಆದರೆ, ಪ್ರಸಕ್ತ ವರ್ಷ ಇ.ಪಿ. ಧಾರಣೆ ರೂ. ೩೯೦ರ ಗಡಿ ದಾಟಿಲ್ಲ. ಇದೂ ಆರಂಭಿಕ ಹಂತದಲ್ಲಿ ಮಾತ್ರ ದೊರೆತಿತ್ತು. ಈ ಸಂದರ್ಭದಲ್ಲಿ ಶಿಫ್‌ಮೆಂಟ್‌ಗೆ ಒಂದಷ್ಟು ಬೇಡಿಕೆ ಇದ್ದ ಕಾರಣದಿಂದ ಮಾತ್ರ ಇದು ಲಭ್ಯವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಇ.ಪಿ. ದರ ರೂ. ೩೫೦ ರಿಂದ ರೂ. ೩೬೫ರ ಮಟ್ಟಿಗೆ ಸೀಮಿತವಾಗಿದೆ. ಈ ದರದಲ್ಲೂ ದಿನನಿತ್ಯ ಬದಲಾವಣೆ ಕಂಡುಬರುತ್ತಿದೆ. ಈ ಕಾರಣದಿಂದಾಗಿ ಬೆಳೆಗಾರರು ತಮ್ಮ ಕಾಫಿಯನ್ನು ಮಾರಾಟ ಮಾಡುವುದೊ..ಅಥವಾ ದಾಸ್ತಾನು ಇಡುವುದೋ ಎಂಬ ತೊಯ್ದಾಟದಲ್ಲೇ ದಿನಕಳೆಯುವಂತಾಗಿದೆ. ಯಾವುದೇ ಖಚಿತತೆ ಇಲ್ಲದ ಕಾರಣ ಕಾಫಿ ವಹಿವಾಟು ಪ್ರಸ್ತುತ ಸಮುದ್ರದ ನಡುವೆ ನಿಂತು ಹೋಗಿರುವ ಹಡಗಿನಂತಾಗಿದೆ.