ಮಡಿಕೇರಿ,ಏ.೧೩; ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಮರಗೋಡು ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಜನಾಂಗದ ನಡುವೆ ಏರ್ಪಡಿಸಲಾಗಿರುವ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಕೊಡಗು ಪತ್ರಕರ್ತರ ಸಂಘದ ತಂಡ ಗೆಲುವು ಸಾಧಿಸಿದೆ.
ಬೆಳಿಗ್ಗೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪತ್ರಕರ್ತರ ತಂಡ ನಿಗದಿತ ೬ ಓವರ್ಗಳಲ್ಲಿ ೫ ವಿಕೆಟ್ಗೆ ೪೬ ರನ್ ಪೇರಿಸಿತು. ಉತ್ತರವಾಗಿ ಆಡಿದ ಸ್ಥಳೀಯ ಆತಿಥೇಯ ಗೌಡ ಇವಿನಿಂಗ್ ಸ್ಟಾರ್ ತಂಡ ೮ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸಿ ಎರಡು ರನ್ಗಳ ಅಂತರದಿAದ ಸೋಲನುಭವಿಸಿತು.
ಇದಕ್ಕೂ ಮುನ್ನ ಅತಿಥಿಯಾಗಿದ್ದ ಮ್ಯಾರಥಾನ್ ಓಟಗಾರ ಹೊಸೋಕ್ಲು ಚಿಣ್ಣಪ್ಪ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಅತಿಥಿಗಳು ಇದ್ದರು. ಕುಡೆಕಲ್ ಸಂತೋಷ್ ನಾಯಕತ್ವದ ಪತ್ರಕರ್ತರ ತಂಡದಲ್ಲಿ ಉಪ ನಾಯಕ ವಿನೋದ್ ಮೂಡಗದ್ದೆ, ಸುರೇಶ್ ಬಿಳಿಗೇರಿ, ಖಲೀಲ್, ವಿವೇಕ್ ಮೊಗೇರ, ಅಶೋಕ, ದಿನೇಶ್, ಹನೀಫ್, ಸುರೇಶ್ ಕುಮಾರ್ ಗುಹ್ಯ, ಕುಡೆಕಲ್ ನಿಹಾಲ್, ಝಿಯಾದ್ ಆಟವಾಡಿದರು.
ಉಳುವಾರನ ಪ್ರಿಕ್ವಾರ್ಟರ್ಗೆ
ನಂತರ ನಡೆದ ಮೊದಲ ಪಂದ್ಯದಲ್ಲಿ ಮೂಡಗದ್ದೆ ತಂಡ ನಿಗದಿತ ೬ ಓವರ್ಗಳಲ್ಲಿ ೩ ವಿಕೆಟ್ಗೆ ೫೭ ರನ್ ಗಳಿಸಿದರೆ, ತುಂತಜೆ ತಂಡ ಒಂದು ವಿಕೆಟ್ ನಷ್ಟದಲ್ಲಿ ೬೦ ರನ್ ಗಳಿಸಿ ಗುರಿ ಸಾಧಿಸಿತು. ಹೊಸೂರು ತಂಡ ೪ ವಿಕೆಟ್ಗೆ ೫೦ ರನ್ ಕಲೆ ಹಾಕಿದರೆ, ಕಾಂಗಿರ ತಂಡ ೭ ವಿಕೆಟ್ ಕಳೆದುಕೊಂಡು ೩೪ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ತೇಲಬೈಲು ತಂಡ ೬ ವಿಕೆಟ್ಗೆ ೫೭ ರನ್ ಗಳಿಸಿದರೆ, ಕೈಕೇರಿ ಮುಕ್ಕಾಟಿ ತಂಡ ೬ ವಿಕೆಟ್ಗೆ ೪೯ ರನ್ ಗಳಿಸಿ ಸೋಲನುಭವಿಸಿತು. ಉಳುವಾರನ ತಂಡ ೧ ವಿಕೆಟ್ ನಷ್ಟದಲ್ಲಿ ೯೪ ರನ್ ಕಲೆ ಹಾಕಿದರೆ,ತುಂತಜೆ ತಂಡ ೪ ವಿಕೆಟ್ ಕಳೆದುಕೊಂಡು ಕೇವಲ ೨೧ ರನ್ ಮಾತ್ರ ಗಳಿಸಿ ೭೩ ರನ್ಗಳ ಬೃಹತ್ ಅಂತರದಿAದ ಸೋಲು ಕಂಡಿತು. ಹೊಸೂರು ತಂಡ ೨ ವಿಕೆಟ್ಗೆ ೭೭ ರನ್ ಗಳಿಸಿದರೆ, ತೇಲಬೈಲು ತಂಡ ೭ ವಿಕೆಟ್ ಕಳೆದುಕೊಂಡು ೫೦ರನ್ ಮಾತ್ರ ಗಳಿಸಿ ೨೭ ರನ್ಗಳ ಅಂತರದಿAದ ಸೋಲನುಭವಿಸಿತು. ಮುಕ್ಕಾಟಿ ತಂಡ ೭ ವಿಕೆಟ್ಗೆ ೨೪ ರನ್ ಗಳಿಸಿದರೆ, ಬೈಮನ ತಂಡ ೫ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಹೊಸೂರು ತಂಡ ೭ ವಿಕೆಟ್ಗೆ ೪೬ ರನ್ ಗಳಿಸಿದರೆ ಉಳುವಾರನ ತಂಡ ೧ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಇದರೊಂದಿಗೆ ಉಳುವಾರನ ತಂಡ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದೆ.