ಮಡಿಕೇರಿ, ಏ. ೧೩: ಚೆರಿಯಪರಂಬುವಿನಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ೨ನೇ ಸುತ್ತಿನ ಪಂದ್ಯಗಳು ಆರಂಭವಾದವು. ಇಂದು ನಡೆದ ಪಂದ್ಯಗಳಲ್ಲಿ ೩ ಆಟಗಾರರು ಹ್ಯಾಟ್ರಿಕ್ ಸಾಧನೆ ಗೈದರು.
ನೆರವಂಡ ತಂಡವು ಕಾಂಗಿರ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ನೆರವಂಡ ಪರ ನಾಚಪ್ಪ ಹ್ಯಾಟ್ರಿಕ್ ಸಾಧನೆ ಗೈದರು.
ಕೋದಂಡ ತಂಡವು ಮೂವೆರ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು.
ಕಲ್ಯಾಟಂಡ ತಂಡವು ಬಡುವಮಂಡವನ್ನು ಟೈ ಬ್ರೇಕರ್ನಲ್ಲಿ ೪-೨ ಅಂತರದಲ್ಲಿ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೧-೧ ಗೋಲುಗಳ ಸಮಬಲವಾಗಿತ್ತು.
ಮಾಚಿಮಂಡ ತಂಡವು ಕೇಟೋಳಿರ ತಂಡವನ್ನು ೬-೦ ಗೋಲುಗಳ ಅಂತರದಲ್ಲಿ ಮಣಿಸಿತು. ಮಾಚಿಮಂಡ ಪರ ಬಿದ್ದಪ್ಪ ಅವರು ಹ್ಯಾಟ್ರಿಕ್ ಸಾಧನೆ ಗೈದರು.
ಮೇಚಂಡ ತಂಡವು ಬಟ್ಟಿರ ತಂಡವನ್ನು ೩-೦ ಗೋಲುಗಳ ಅಂತರದಲ್ಲಿ ಮಣಿಸಿತು.
ಮುರುವಂಡ ತಂಡವು ಐನಂಡ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು.
ಅಪ್ಪನೆರವಂಡ ತಂಡವು ಅಪ್ಪುಮಣಿಯಂಡ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು.
ಕಲಿಯಂಡ ತಂಡವು ೨-೦ ಗೋಲುಗಳ ಅಂತರದಲ್ಲಿ ಕಳಕಂಡ ತಂಡದ ವಿರುದ್ಧ ಜಯ ಸಾಧಿಸಿತು.
ಮಚ್ಚಮಾಡ ತಂಡವು ಚೆರುವಾಳಂಡ ತಂಡದ ವಿರುದ್ಧ ಟೈ ಬ್ರೇಕರ್ನಲ್ಲಿ ೫-೪ ಅಂತರದಲ್ಲಿ ಗೆಲುವು ಸಾಧಿಸಿತು. ನಿಗದಿತ ಪಂದ್ಯದಲ್ಲಿ ೨-೨ ಸಮಬಲ ಸಾಧನೆಯಾಗಿತ್ತು.
ಪುಟ್ಟಿಚಂಡ ತಂಡವು ಅನ್ನಡಿಯಂಡ ತಂಡದ ವಿರುದ್ಧ ೪-೦ ಅಂತರದಲ್ಲಿ ಗೆಲುವು ಸಾಧಿಸಿತು.
ಬಲ್ಲಚಂಡ ತಂಡವು ಪಟ್ಟಡ ತಂಡದ ವಿರುದ್ಧ ೫-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಮೇಚಿಯಂಡ ತಂಡವು ಕೋಡಿರ ತಂಡದ ವಿರುದ್ಧ ೨-೧ ಗೋಲುಗಳಿಂದ ಜಯ ಸಾಧಿಸಿತು.
ಉದ್ದಿನಾಡಂಡ ತಂಡವು ಅಮ್ಮಾಟಂಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು.
ನಂಬುಡಮಾಡ ತಂಡವು ಚೇಂದ್ರಿಮಾಡ (ಬಲ್ಯಮನೆ) ತಂಡವನ್ನು ೫-೦ ಗೋಲುಗಳಿಂದ ಸೋಲಿಸಿತು.
ಬಿದ್ದಂಡ ತಂಡವು ಕೈಪಟ್ಟಿರ ತಂಡವನ್ನು ೬-೧ ಗೋಲುಗಳಿಂದ ಮಣಿಸಿತು.
ಕುಪ್ಪಂಡ (ನಾಂಗಾಲ) ತಂಡವು ಚೆರಿಯಂಡ ತಂಡದ ವಿರುದ್ಧ ೫-೧ ಗೋಲುಗಳಿಂದ ಗೆಲುವು ಸಾಧನೆ ಮಾಡಿತು. ಕುಪ್ಪಂಡ ಪರ ಗೌರವ್ ಹ್ಯಾಟ್ರಿಕ್ ಸಾಧನೆ ಗೈದರು.
ಅಮ್ಮಣಿಚಂಡ ತಂಡವು ಮುಂಡAಡ ತಂಡದ ವಿರುದ್ಧ ೫-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಕರವಟ್ಟಿರ ತಂಡವು ೧-೦ ಗೋಲುಗಳಿಂದ ಚೋಕಿರ ತಂಡವನ್ನು ಸೋಲಿಸಿತು.
ತೀತಮಾಡ ತಂಡವು ತೆಕ್ಕಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು.