ಮಡಿಕೇರಿ, ಏ. ೧೩: ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ೭ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮ ತಾ. ೧೬ ರಂದು ನಡೆಯಲಿದೆ.

ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುಂಟಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚೇಂದ್ರಿಮಾಡ ಕರುಂಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಲಿದ್ದಾರೆ. ಹಿರಿಯರು ಹಾಗೂ ಸಮಾಜ ಸೇವಕರಾದ ಪುಡಿಯಂಡ ಮುತ್ತಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಕುಶಾಲನಗರ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ‘ಕೊಡವ ಪುದಿಯಾಂಡ್, ಬಿಸು ಚಂಗ್ರಾAದಿ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ.