ಮಡಿಕೇರಿ, ಏ. ೧೨: ಕೊಡಗು ಜಿಲ್ಲೆಯವರಾದ ಬಾಲಿವುಡ್ ಸಿನಿಮಾ ನಟ, ಇತ್ತೀಚೆಗಷ್ಟೆ ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರ ಕಾಂತಾರ ಚಾಪ್ಟರ್-೧ರಲ್ಲಿ ಅಭಿನಯಿಸಿರುವ ಕಂಬೆಯAಡ ಗುಲ್ಷನ್ ದೇವಯ್ಯ ಅವರಿಗೆ ಉತ್ತಮ ಖಳನಟ ಪ್ರಶಸ್ತಿ (ನೆಗೆಟಿವ್ ರೋಲ್) ಲಭ್ಯವಾಗಿದೆ.
ಇಂಡಿಯನ್ ನ್ಯಾಷನಲ್ ಸಿನಿ ಅಕಾಡೆಮಿ (ಐಎನ್ಸಿಎ) ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಗುಲ್ಷನ್ ದೇವಯ್ಯ ಕಾಂತಾರ ಚಿತ್ರದಲ್ಲಿ ನೆಗಟಿವ್ ರೋಲ್ನಲ್ಲಿ ಮಾಡಿರುವ ಅಭಿನಯಕ್ಕೆ ಈ ಪ್ರಶಸ್ತಿ ದೊರೆತಿದೆ. ತಾ. ೧೬ ರಂದು ಮುಂಬೈಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ. ಹಲವಷ್ಟು ಹಿಂದಿ ಚಲನಚಿತ್ರಗಳಲ್ಲಿ ಮಾತ್ರ ನಟಿಸಿದ್ದ ಗುಲ್ಷನ್ ದೇವಯ್ಯ ಮೊದಲ ಬಾರಿಗೆ ಕನ್ನಡ ಚಿತ್ರ ಕಾಂತಾರ ಚಾಪ್ಟರ್-೧ನಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯದ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಾಂತಾರದ ಬಳಿಕ ಮತ್ತೆ ಬಾಲಿವುಡ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇವರು ಮೂಲತಃ ಕಕ್ಕಬ್ಬೆಯವರಾದ ಬೆಂಗಳೂರಿನಲ್ಲಿ ನೆಲೆಸಿರುವ ಕಂಬೆಯAಡ ದೇವಯ್ಯ ಹಾಗೂ ಸಾಹಿತಿ ಪುಷ್ಪ ದೇವಯ್ಯ ಅವರ ಪುತ್ರ.