ಚೆಯ್ಯಂಡಾಣೆ: ಎಡಪಾಲಕೇರಿ ಶ್ರೀ ಪೊನ್ನುಮುತ್ತಪ್ಪ ಮಠಪುರ, ಶ್ರೀ ವಯನಾಟ್ ಕುಲವನ್ (ಬೈನಾಡ್ ಅಜ್ಜಪ್ಪ) ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತೆರೆ ಮಹೋತ್ಸವವು ಯಶಸ್ವಿಯಾಗಿ ಜರುಗಿತು. ಮುತ್ತಪ್ಪ ಪೈಂಗುತ್ತಿ, ಮಧ್ಯಾಹ್ನ ಅನ್ನ ಸಂತರ್ಪಣೆ, ನಂತರ ಮುತ್ತಪ್ಪ ವೆಳ್ಳಾಟಂ ನಡೆಯಿತು.

ನಾಗದೇವರ ಪ್ರತಿಷ್ಠಾ ವರ್ಧಂತಿ

ವೀರಾಜಪೇಟೆ: ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗ ದೇವಸ್ಥಾನದಲ್ಲಿ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗದೇವರ ಪ್ರತಿಷ್ಠಾ ವರ್ಧಂತಿಯ ೫ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಪ್ರಧಾನ ಕಳಶ ಪೂಜೆ, ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಕಳಶ ಅಭಿಷೇಕ, ಬೆಳ್ಳಿಯ ಕವಚ ಸಮರ್ಪಣೆ ನಡೆಯಿತು. ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ದೇವರ ಅಲಂಕಾರ ಪೂಜೆ ನಡೆದ ಬಳಿಕ, ದೇವರ ನೃತ್ಯ ಬಲಿ ಪ್ರದರ್ಶನ, ದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ದಂಡಿನಮ್ಮ ದೇವಿಯ ಪೂಜ್ಯೋತ್ಸವ

ಕೂಡಿಗೆ: ಕೂಡಿಗೆ ಗ್ರಾಮದ ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ ಶ್ರೀ ಮುತ್ತತ್ ರಾಯ ದೇವಸ್ಥಾನ ಹಾಗೂ ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ-ಕೋಟೆಯ ಗ್ರಾಮದ ದೇವತಾ ಸಮಿತಿಯಲ್ಲಿ ತಾ. ೨೪ ರಂದು ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ-೨೦೨೬ ನಡೆಯಲಿದೆ.

ವಾರ್ಷಿಕ ಪೂಜ್ಯೋತ್ಸವ ಅಂಗವಾಗಿ ಶ್ರೀ ದಂಡಿನಮ್ಮ ದೇವಿಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ. ರಾತ್ರಿ ೮ ಗಂಟೆಗೆ ಅಗ್ನಿಸ್ಥಾಪನೆ, ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮಸ್ಥರು ಮತ್ತು ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಕಲಶ ಪೂಜೆ, ಹಣ್ಣಾಡಗೆ ಉತ್ಸವ ಮತ್ತು ಕೊಂಡೋತ್ಸವ ಹಾಗೂ ಮುಂಜಾನೆ ಉಯ್ಯಾಲೆ ಮಹೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು ತಿಳಿಸಿದ್ದಾರೆ.

ತಾ. ೨೫ ರಂದು ಶ್ರೀ ದಂಡಿನಮ್ಮ ದೇವಿಗೆ ಪೂಜೆ ಜಾತ್ರೋತ್ಸವ ನಡೆಯಲಿದೆ. ನಂತರ ಮುತ್ತತ್ ರಾಯ ದೇವರ ಹರಿಸೇವಾ ಮಹೋತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಸಮಿತಿ ಕಾರ್ಯದರ್ಶಿ ಕೆ.ಟಿ. ವೆಂಕಟೇಶ್ ತಿಳಿಸಿದ್ದಾರೆ.ಶ್ರೀ ಶಂಕರ ಜಯಂತಿ ಆಚರಣೆ

ಮಡಿಕೇರಿ: ಮಡಿಕೇರಿಯ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮತ್ತು ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಸಹಯೋಗದೊಂದಿಗೆ ತಾ. ೨೧ ರಂದು ಶ್ರೀ ಶಂಕರ ಜಯಂತಿ ಆಚರಣೆ ನಿಧಿಯ ಶತಮಾನ ಭವನದಲ್ಲಿ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.

ಬೆಳಿಗ್ಗೆ ೭.೩೦ ರಿಂದ ೯ ಗಂಟೆವರೆಗೆ ವೈಭವ ತಂಡದಿAದ ರುದ್ರಾಭಿಷೇಕ ಪೂರ್ವಕ ಶಿವಪೂಜೆ, ೯ ರಿಂದ ೯.೩೦ ಗಂಟೆವರೆಗೆ ಉಪಹಾರ, ೯.೩೦ ರಿಂದ ೧೦.೩೦ ಗಂಟೆವರೆಗೆ ಶಂಕರ್ ಭಜನ್ ವಿಪ್ರ ಮಹಿಳೆಯರಿಂದ ಸ್ತೋತ್ರವರಣ. ೧೦.೩೦ ರಿಂದ ೧೧ ರವರೆಗೆ ಸುಳ್ಯದ ಸಂಸ್ಕೃತ ಅಧ್ಯಾಪಕ ವೆಂಕಟೇಶಕುಮಾರ್ ಅವರಿಂದ ಉಪನ್ಯಾಸ ಬಳಿಕ ಸನ್ಮಾನ ಕಾರ್ಯಕ್ರಮಗಳು ಸಮಾರೋಪ ನುಡಿ ಮಹಾಮಂಗಳಾರತಿ ನಡೆಯಲಿದ್ದು ೧ ಗಂಟೆಗೆ ಪ್ರಸಾದ ಭೋಜನವಿದೆ ಎಂದು ನಿಧಿಯ ಅಧ್ಯಕ್ಷ ರಾಮಚಂದ್ರ ಸಿ ಮೂಗೂರು ಹಾಗೂ ಕಾರ್ಯದರ್ಶಿ ಜಗದೀಶ್ ಸೋಮಯಾಜಿ ತಿಳಿಸಿದ್ದಾರೆ.

ಐಗೂರಿನಲ್ಲಿ ಸುವರ್ಣ ಮಹೋತ್ಸವ

ಐಗೂರು: ಐಗೂರಿನ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೈವಸ್ಥಾನದಲ್ಲಿ ೫೦ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ದೈವಕೋಲ ೫ ದಿನಗಳ ಕಾಲ ನಡೆಯಲಿದೆ.

ತಾ. ೨೩ರಂದು ೯ಕ್ಕೆ ಗಣಪತಿ ಹೋಮ, ೧೧ಕ್ಕೆ ಶುದ್ದಿಪುಣ್ಯ, ರಾತ್ರಿ ೮ ಗಂಟೆಗೆ ಅಣ್ಣಪ್ಪಸ್ವಾಮಿ ದರ್ಶನ ರಾತ್ರಿ ೯ಕ್ಕೆ ಅನ್ನದಾನ ನಡೆಯಲಿದೆ.

ತಾ. ೨೪ ಶುಕ್ರವಾರ ಬೆಳಿಗ್ಗೆ ೫ ಕ್ಕೆ ಕಳಸದ ಮೆರವಣಿಗೆ, ೧೦ ಗಂಟೆಗೆ ಮಹಾಪೂಜೆ, ೧೧ಕ್ಕೆ ಹಣ್ಣು ಕಾಯಿ ಪೂಜೆ, ೧೧-೩೦ ಗಂಟೆಗೆ ಆದಿಶಕ್ತಿ ಮಹಾತಾಯಿ ದರ್ಶನ, ಮಧ್ಯಾಹ್ನ ೧೨-೩೦ ಗಂಟೆಗೆ ಭದ್ರಕಾಳಿ ದೇವಿಯ ದರ್ಶನ ಹಾಗೂ ಗುರುದೀಕ್ಷೆ ಪೂಜೆ, ಮಧ್ಯಾಹ್ನ ಒಂದು ಗಂಟೆಗೆ ಅನ್ನದಾನ ನಡೆಯಲಿದೆ.

ತಾ. ೨೬ ರಂದು ಕೋಲಗಳು ಆರಂಭವಾಗಲಿದ್ದು, ಸಂಜೆ ೭ ಏಳು ಗಂಟೆಗೆ ಭಂಡಾರ ಆಗಮನ, ೮. ಗಂಟೆಗೆ ಅನ್ನದಾನ, ರಾತ್ರಿ ೮:೩೦ ಗಂಟೆಗೆ ವಸ್ತçದಾನ ಕಾರ್ಯಕ್ರಮ, ರಾತ್ರಿ ೯ಕ್ಕೆ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ ನಡೆಯಲಿದೆ.

ತಾ. ೨೭ ರಂದು ಬೆಳಗಿನ ಜಾವ ೨.೩೦ ಗಂಟೆಗೆ ಮಂತ್ರವಾದಿ ಗುಳಿಗ ದೈವದ ಕೋಲ, ಬೆಳಗಿನ ಜಾವ ೩.೩೦ ಗಂಟೆಗೆ ಕುಪ್ಪೆ ಪಂಜುರ್ಲಿ ದೈವದ ಕೋಲ, ಬೆಳಗಿನ ಜಾವ ೫ಕ್ಕೆ ಮಂತ್ರ ದೇವತೆ ಕೋಲ, ಬೆಳಿಗ್ಗೆ ೭ಕ್ಕೆ ಧೂಮಾವತಿ ದೈವದ ಕೋಲ, ೮.೩೦ಕ್ಕೆ ಲಘು ಉಪಹಾರ, ಬೆಳಿಗ್ಗೆ ೯ ಗಂಟೆಗೆ ಧರ್ಮ ದೈವದ ಕೋಲ, ೧೦ ಗಂಟೆಗೆ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ ೧೨ ಗಂಟೆಗೆ ಭಂಡಾರ ನಿರ್ಗಮನ, ಮಧ್ಯಾಹ್ನ ೧ಕ್ಕೆ ಮಹಾಮಂಗಳಾರತಿ, ನಂತರ ಅನ್ನದಾನ ನಡೆಯಲಿದೆ. ತಾ. ೨೮ ರಂದು ಬೆಳಿಗ್ಗೆ ೮ಕ್ಕೆ ಬಲಿ ಒಪ್ಪಿಸುವುದು, ೧೦:೩೦ ಗಂಟೆಗೆ ಭದ್ರಕಾಳಿ ದೇವಿಯ ಕೋಲ, ಬೆಳಿಗ್ಗೆ ೧೧ ಗಂಟೆಗೆ ಜಾಗದ ಗುಳಿಗನ ಕೋಲ, ೧೨ ಗಂಟೆಗೆ ಕೊರತಿ ದೈವದ ಕೋಲ, ಮಧ್ಯಾಹ್ನ ೧:೩೦ ಗಂಟೆಗೆ ಎಡೆ ಪ್ರಸಾದ ವಿನಿಯೋಗ, ಅಪರಾಹ್ನ ೩ಕ್ಕೆ ಮಹಾಮಂಗಳಾರತಿ, ಸಂಜೆ ೬ ಗಂಟೆಗೆ ದೈವ ನಡೆ ಮುಚ್ಚುವುದರೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ ಎಂದು ದೈವದರ್ಶಿ ಎಸ್ .ಪಿ. ಆನಂದ ಪೂಜಾರಿ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.

ಅಪ್ಪಯ್ಯ ಸ್ವಾಮಿ ಜನ್ಮದಿನೋತ್ಸವ

ವೀರಾಜಪೇಟೆ: ಶ್ರೀ ಕಾವೇರಿ ಆಶ್ರಮದ ಸಂಸ್ಥಾಪಕ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿಯವರ ೧೪೧ನೇ ಜನ್ಮದಿನೋತ್ಸವವನ್ನು ತಾ. ೧೬ ರಂದು ವೀರಾಜಪೇಟೆ ಶ್ರೀ ಕಾವೇರಿ ಆಶ್ರಮದಲ್ಲಿ ಆಚರಿಸಲಾಗುವುದು. ಪೂರ್ವಾಹ್ನ ೯ ಗಂಟೆಗೆ ಶ್ರೀ ಗುರು ಪೂಜೆ ೯.೩೦ಕ್ಕೆ ಅರ್ಚಕ ಬಿ.ಎಸ್. ಮೋಹನ್‌ಭಟ್ ಅವರಿಂದ ರುದ್ರಾಭಿಷೇಕ ಪೂಜೆ, ೧೦.೩೦ ಗಂಟೆಗೆ ಶ್ರೀ ಕಾವೇರಿ ಭಕ್ತಜನ ಸಂಘದ ಅಧ್ಯಕ್ಷ ಎನ್. ಯು. ಅಯ್ಯಪ್ಪ ಅವರಿಂದ ಗುರುವಂದನಾ ಕಾರ್ಯಕ್ರಮ. ೧೧ ಗಂಟೆಗೆ ಬಾಳೆಲೆಯ ಕಾವೇರಿ ಕಲಾ ಸಮಿತಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಏರ್ಪಟ್ಟಿದೆ. ೧ ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ - ಊಟೋಪಚಾರ ನಡೆಯಲಿದೆ.