*ಗೋಣಿಕೊಪ್ಪ, ಏ. ೧೨: ಕೊರೊನಾ ಕಾಲಘಟ್ಟದಿಂದ ಇಂದಿನ ಯುದ್ಧದ ವಿದ್ಯಮಾನಗಳ ಅವಧಿ ತನಕ ಛಾಯಾಚಿತ್ರಗಾರರು ಆರ್ಥಿಕ ಮತ್ತು ಸ್ವಾವಲಂಬಿ ಬದುಕಿನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದಕ್ಷಿಣ ಕೊಡಗಿನ ಛಾಯಾಚಿತ್ರಗಾರರ ಸಂಘದ ಅಧ್ಯಕ್ಷ ರವೀಂದ್ರ ಆತಂಕ ವ್ಯಕ್ತಪಡಿಸಿದರು. ಗೋಣಿಕೊಪ್ಪದಲ್ಲಿ ನಡೆದ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಇವೆಂಟ್ ಮ್ಯಾನೇಂಜ್‌ಮೆAಟ್ ಎಂಬ ಹೆಸರಿನಲ್ಲಿ ಆನ್‌ಲೈನ್, ಫೇಸ್‌ಬುಕ್, ವೆಬ್‌ಸೈಟ್‌ಗಳ ಮೂಲಕ ಪರಿಚಯವಿದ್ದವರಿಗೆ ಶುಭ ಸಮಾರಂಭಗಳ ಛಾಯಾಚಿತ್ರ ತೆಗೆಯಲು ಜನರು ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಕೆಲ ಜನರು ಮೋಸ ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಬಂದ ಹಲವಾರು ದೂರುಗಳನ್ನು ಸಂಘ ಖುದ್ದು ಹಾಜರಿದ್ದು ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ವಿನಾಕಾರಣ ಸಮಸ್ಯೆಯನ್ನು ಜನರು ಎಳೆದುಕೊಳ್ಳುವ ಮೊದಲು ಸ್ಥಳೀಯ ಛಾಯಾಚಿತ್ರಗಾರರಿಗೆ ಆದ್ಯತೆ ನೀಡಿದಾಗ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಕಾರ್ಯಕ್ರಮಗಳಿಗೆ ಫೋಟೋ ತೆಗೆಯುವ ವಿಚಾರಕ್ಕೆ ಸ್ಥಳೀಯರಿಗೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದರು. ಕೊರೊನಾ ಮತ್ತು ಇಂದಿನ ಯುದ್ಧದ ವಿಚಾರಗಳಿಂದಾಗಿ ಫೋಟೋ ತೆಗೆಯಲು ಬೇಕಾದ ಕೆಲವು ಪರಿಕರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕ ಬೆಲೆಯ ಬಿಸಿ ವೃತ್ತಿಪರ ಛಾಯಾಚಿತ್ರಗಾರರÀನ್ನು ಸುಡುತ್ತಿದೆ.\ ಕ್ಯಾಮರಾಗಳ ಬೆಲೆಯೂ ಗಗನಕ್ಕೇರಿದೆ, ಪೆನ್ ಡ್ರೆöÊವ್, ಹಾರ್ಡ್ಡಿಸ್ಕ್, ಮೆಮೊರಿ ಕಾರ್ಡ್, ಫೋಟೋ ಪ್ರಿಂಟ್, ಆಲ್ಬಮ್ ಇತರ ಎಲ್ಲಾ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಈ ಹಿನ್ನೆಲೆ ಛಾಯಚಿತ್ರಗಾರರು ವೃತ್ತಿಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ೧೦ ವರ್ಷಗಳಿಂದ ಪರಿಷ್ಕರಿಸದೆ ಇದ್ದ ಫೋಟೋ ವೃತ್ತಿಯ ದರವನ್ನು ಏರಿಸುವ ನಿರ್ಧಾರವನ್ನು ಸಂಘದ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ. ಆ ನಿಟ್ಟಿನಲ್ಲಿ ೨೦೨೬ ಏಪ್ರಿಲ್ ನಿಂದ ಹೊಸ ದರಗಳಂತೆ ಶೇಕಡ ಹತ್ತರಷ್ಟು ಹೆಚ್ಚಿಸಲು ಸಂಘ ತೀರ್ಮಾನಿಸಿದೆ, ಇದಕ್ಕೆ ಜನರ ಸಹಕಾರ ಬಹು ಅಗತ್ಯ ಎಂದು ಮನವಿ ಮಾಡಿದರು. ಸಂಘದ ಕಾರ್ಯದರ್ಶಿ ರಾಮದಾಸ್ ಮಾತನಾಡಿ, ಇತ್ತೀಚಿನ ಬೆಳವಣಿಗೆಯಲ್ಲಿ ಮೊಬೈಲ್‌ಗಳಲ್ಲಿ ಫೋಟೋಗಳನ್ನು ಸೆರೆ ಹಿಡಿದು ಜೆರಕ್ಸ್ ಅಂಗಡಿ ಅಥವಾ ಸೈಬರ್ ಸೆಂಟರ್‌ಗಳಲ್ಲಿ ತಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳುತ್ತಿರುವುದರಿಂದ ಛಾಯಾಚಿತ್ರಗಾರರು ಅತಂತ್ರ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ.
ಜತೆಗೆ ಹೊರಜಿಲ್ಲೆಯವರಿಗೂ ಮದುವೆ ಮತ್ತು ಇತರೆ ಸಮಾರಂಭಗಳ ಚಿತ್ರ ತೆಗೆಯಲು ನೀಡುತ್ತಿರುವುದರಿಂದ ಸ್ಥಳೀಯ ಛಾಯಾಚಿತ್ರಗಾರರು ಕೆಲಸದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಜಿತ್ ವಿ.ಜಿ ಉಪಸ್ಥಿತರಿದ್ದರು.