ಕಣಿವೆ, ಏ. ೧೨: ಕುಶಾಲನಗರದ ಪ್ರತಿಷ್ಠಿತ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತೊರೆನೂರು ಗ್ರಾಮದ ಹೆಚ್.ಬಿ. ಚಂದ್ರಪ್ಪ ನೇಮಕವಾಗಿದ್ದಾರೆ.
ಒಟ್ಟು ೧೨ ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ಬಿ. ಚಂದ್ರಪ್ಪ ಅವರಿಗೆ ೭ ಮತಗಳು, ಪ್ರತಿಸ್ಪರ್ಧಿ ಅಭ್ಯತ್‌ಮಂಗಲದ ಕೆ.ಎಂ. ಪ್ರಸನ್ನ ಅವರಿಗೆ ೫ ಮತಗಳು ದೊರೆತವು.
ರಿಟರ್ನಿಂಗ್ ಅಧಿಕಾರಿಯಾಗಿ ಕೊಡಗು ಡಿಸಿಸಿ ಬ್ಯಾಂಕ್‌ನ ಮೋಹನ್ ಕಾರ್ಯನಿರ್ವಹಿಸಿದರು.
ಹಿರಿಯ ಸಹಕಾರಿ ಎಂ.ಎನ್. ಕುಮಾರಪ್ಪ ಅವರ ನಿಧನದಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಈ ಸಂದರ್ಭ ನಿರ್ದೇಶಕರಾದ ಬಿ.ಎಂ. ಪಾರ್ವತಿ, ಕೆ.ಎಸ್. ಮಂಜುನಾಥ್, ಎನ್.ಸಿ. ಪೊನ್ನಪ್ಪ, ಹೆಚ್.ಜೆ. ಶರತ್, ಬಿ.ಸಿ. ಮಲ್ಲಿಕಾರ್ಜುನ, ಹೆಚ್.ಡಿ. ನಂದಕುಮಾರ್, ಡಿ.ಕೆ. ಗಂಗಾಧರ್, ಹೆಚ್.ಎನ್. ಮಹಾದೇವ ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಜಲಜಾ ಶೇಖರ್, ಸಂಘದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇದ್ದರು.