ಸೋಮವಾರಪೇಟೆ, ಏ. 11: ಸಮೀಪದ ತಾಕೇರಿ ಗ್ರಾಮದಲ್ಲಿರುವ ಶ್ರೀ ಕಾಲಭೈರವೇಶ್ವರ ಮತ್ತು ಶ್ರೀ ವನದುರ್ಗಾದೇವಿಯ ದೇವಾಲಯದ ಪುನರ್ ಪ್ರತಿμÁ್ಠಪನಾ ಮತ್ತು ಅಷ್ಠಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ದೇವಾಲಯ ಆವರಣದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು, ಭಗವಂತನು ಕೇವಲ ಗುಡಿಗಳಲ್ಲೇ ಸೀಮಿತನಾಗಿರುವುದಿಲ್ಲ. ಆತನು ಪ್ರತಿಯೊಬ್ಬರ ಹೃದಯದಲ್ಲಿ, ಮನೆಮನೆಗಳಲ್ಲಿ, ನಮ್ಮ ನಡೆನುಡಿಗಳಲ್ಲಿ ವಾಸಿಸುತ್ತಾನೆ ಎಂದು ಹೇಳಿದರು.

ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಉತ್ತಮ ಮನುಷ್ಯನಾಗಿ ಬದುಕಬಹುದು. ಅಂತರಾತ್ಮದಲ್ಲಿ ದೇವರನ್ನು ಪ್ರತಿμÁ್ಠಪನೆ ಮಾಡಿಕೊಂಡು, ಸತ್ಯ, ಧರ್ಮ, ದಯೆ ಮತ್ತು ಪ್ರೀತಿ ಎಂಬ ಮೌಲ್ಯಗಳೊಂದಿಗೆ ಬದುಕಿದಾಗ ನಮ್ಮ ಜೀವನವೇ ದೇವಾಲಯವಾಗುತ್ತದೆ ಎಂದರು.

ವಿಗ್ರಹ ಪ್ರತಿμÁ್ಠಪನೆ ಕಾರ್ಯಕ್ರಮಗಳು ಗ್ರಾಮದಲ್ಲಿ ಭಕ್ತಿ, ಶಾಂತಿ ಮತ್ತು ಏಕತೆಯನ್ನು ಹೆಚ್ಚಿಸುತ್ತವೆ. ದೇವಾಲಯಗಳು ಕೇವಲ ಪೂಜೆಗಾಗಿ ಮಾತ್ರವಲ್ಲ, ಸಮಾಜದಲ್ಲಿ ಸದುದ್ದೇಶ, ಸತ್ಪ್ರವೃತ್ತಿ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಬೆಳೆಸುವ ಕೇಂದ್ರಗಳಾಗಬೇಕು. ಭಗವಂತನನ್ನು ಗುಡಿಯಲ್ಲಿ ಮಾತ್ರ ನೋಡಿದರೆ ಸಾಲದು; ಮನೆಯೂ ದೇವಾಲಯವಾಗಬೇಕು ಎಂದು ತಿಳಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಹಿಂದಿನಿಂದಲೂ ನಮ್ಮ ರಾಷ್ಟ್ರ ಧರ್ಮ ಮತ್ತು ಸಂಸ್ಕೃತಿಯೊಂದಿಗೆ ಒಟ್ಟಿಗೆ ಬೆಳೆದುಕೊಂಡು ಬಂದಿದೆ. ಸುಸಂಸ್ಕೃತ ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಹಿರಿಯರ ಕೊಡುಗೆಯೂ ಇದೆ. ಕೊಡಗಿನಲ್ಲೂ ಧರ್ಮ, ಸಂಸ್ಕೃತಿ, ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕೊಡಗಿನ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ. ಹೆದ್ದಾರಿಯ ತಡೆಗೋಡೆ ನಿರ್ಮಾಣಕ್ಕೆ 90 ಕೋಟಿ ಅನುದಾನ ಕೇಂದ್ರ ಸರ್ಕಾರ ನೀಡಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ಮಳೆಗಾಲ ಪ್ರಾರಂಭದೊಳಗೆ ಮುಕ್ತಾಯವಾಗಲಿದೆ ಎಂದು ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಎ.ಜೀವಿಜಯ, ಎಂ.ಪಿ.ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ಎ.ಎನ್.ಪದ್ಮನಾಭ, ಶ್ರೀ ಕಾಲಭೈರವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮತ್ತು ಪದಾಧಿಕಾರಿಗಳು ಇದ್ದರು.

ದೇವಾಲಯದಲ್ಲಿ ಗಣಪತಿ, ವಾಸ್ತು ಹೋಮ ವೇದಬ್ರಹ್ಮ ರಘುಪತಿಭಟ್ ತಂತ್ರಿಗಳ ಪುರೋಹಿತ್ಯದಲ್ಲಿ ನೆರವೇರಿತು. ನಂತರ ಶ್ರೀ ಕಾಲಭೈರವೇಶ್ವರ ಹಾಗೂ ಶ್ರೀ ವನದುರ್ಗಿದೇವಿಯ ಪ್ರತಿμÁ್ಠಪನೆ ನಡೆಯಿತು. ಕಳಸ ಹೊತ್ತ ಮಹಿಳೆಯರು ಅತಿಥಿಗಳನ್ನು ಸ್ವಾಗತಿಸಿದರು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.