ಸುಂಟಿಕೊಪ್ಪ, ಏ. 11: ಪಟ್ಟಣದಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಯಮ ಉಲ್ಲಂಫಿಸಿದ ವರ್ತಕರಿಗೆ ದಂಡ ವಿಧಿಸಲಾಯಿತು.

ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ತಂಡವು ಸುಂಟಿಕೊಪ್ಪ ನಗರಾದ್ಯಂತ ಅಂಗಡಿ, ಹೊಟೇಲ್, ಬೇಕರಿ ಹಾಗೂ ಮದ್ಯದಂಗಡಿಗಳಿಗೆ ಭೇಟಿ ನೀಡಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ನಿಯಮ ಉಲ್ಲಂಘಿಸಿದ 13 ಪ್ರಕರಣಗಳನ್ನು ಪತ್ತೆಮಾಡಿ ರೂ. 2300 ದಂಡ ವಿಧಿಸಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಜಿಲ್ಲಾ ಸಂಯೋಜಕಿ ಪುನೀತ, ಸಮುದಾಯ ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ್ ಹಾಗೂ ಪೊಲೀಸ್ ಸಿಬ್ಬಂದಿ ಆಕಾಶ್ ಪಾಲ್ಗೊಂಡಿದರು.