ಮಡಿಕೇರಿ, ಏ.11: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯ 7ನೇ ದಿನದ ಫಲಿತಾಂಶಗಳು :
ಮಲ್ಲಂಡ ತಂಡವು ಬೊಪ್ಪಂಡ ತಂಡವನ್ನು ಟೈ ಬ್ರೇಕರ್ನಲ್ಲಿ 3-2 ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯದಲ್ಲಿ 0-0 ಸಮಬಲ ಸಾಧನೆಯಾಗಿತ್ತು.
ಎಳ್ತಂಡ ತಂಡವು ಸಿದ್ದಂಡವನ್ನು 7-1 ಗೋಲುಗಳಿಂದ ಮಣಿಸಿ ಮುಂದಿನ ಹಂತ ಪ್ರವೇಶಿಸಿತು.
ಕುಂಡ್ರಂಡ ಹಾಗೂ ಅನ್ನಾರ್ಕಂಡ ನಡುವಿನ ಪಂದ್ಯದಲ್ಲಿ ಕುಂಡ್ರಂಡಕ್ಕೆ ವಾಕ್ಓವರ್ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ದೊರಕಿತು.
ನೆರ್ಪಂಡ ತಂಡವು ಕೋಲತಂಡವನ್ನು 4-0 ಗೋಲುಗಳಿಂದ ಮಣಿಸಿತು.
ಮಲ್ಲಮಾಡ ತಂಡವು ಕುಟ್ಟಂಡ (ಕಾರ್ಮಾಡ್) ತಂಡವನ್ನು 4-0 ಅಂತರದಲ್ಲಿ ಸೋಲಿಸಿತು.
ಬಾಚಮಂಡ ತಂಡವು ಮುದ್ದಿಯಡ ತಂಡವನ್ನು 4-0 ಗೋಲುಗಳ ಅಂತರದಲ್ಲಿ ಮಣಿಸಿತು.
ಚೀರಂಡ ಹಾಗೂ ನಡಿಕೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೀರಂಡಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ಪಂದ್ಯಂಡ ಹಾಗೂ ಮಲ್ಲೇಂಗಡ ನಡುವಿನ ಪಂದ್ಯದಲ್ಲಿ ಪಂದ್ಯಂಡಕ್ಕೆ ವಾಕ್ ಓವರ್ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ದೊರಕಿತು.
ಕೊಣಿಯಂಡ ತಂಡವು ಚೋವಂಡವನ್ನು ಟೈ ಬ್ರೇಕರ್ನಲ್ಲಿ 3-0 ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯ 0-0 ಸಮಬಲವಾಗಿತ್ತು.
ಪಾಲೇಂಗಡ ತಂಡವು ಕುಪ್ಪಣಮಾಡವನ್ನು 1-0 ಗೋಲುಗಳಿಂದ ಮಣಿಸಿತು.
ಕಾರೇರ ಹಾಗೂ ಚೇಮಿರ ತಂಡಗಳ ನುಡವಿನ ಪಂದ್ಯದಲ್ಲಿ ಕಾರೇರಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ಕಾಯಪಂಡ ತಂಡವು ನುಚ್ಚಿಮಣಿಯಂಡವನ್ನು ಟೈ ಬ್ರೇಕರ್ನಲ್ಲಿ 3-2 ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ 1-1 ಸಮಬಲವಾಗಿತ್ತು.
ಕಡೇಮಾಡ ತಂಡವು ಅಪ್ಪಚೀರ ತಂಡವನ್ನು 2-1 ಗೋಲುಗಳಿಂದ ಮಣಿಸಿತು.
ಮಚ್ಚುರ ತಂಡವು ಕಾಟುಮಣಿಯಂಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು.
ಮಲ್ಲಂಗಡ ತಂಡವು ಪಳೆಯಂಡ(ಹಮ್ಮಿಯಾಲ)ವನ್ನು 5-0 ಗೋಲುಗಳಿಂದ ಸೋಲಿಸಿತು.
ಚೊಟ್ಟೇರ ಹಾಗೂ ಪಾಂಡೀರ ನಡುವಿನ ಪಂದ್ಯದಲ್ಲಿ ಚೊಟ್ಟೇರಕ್ಕೆ ವಾಕ್ಓವರ್ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ದೊರಕಿತು.
ಮಾಣಿರ ತಂಡವು ಬೊಳ್ಳಿಯಂಗಡವನ್ನು 1-0 ಗೋಲುಗಳಿಂದ ಸೋಲಿಸಿತು.
ಕೋದೇಂಗಡ ತಂಡವು ಚೋಕಂಡವನ್ನು 3-0 ಗೋಲುಗಳಿಂದ ಮಣಿಸಿತು.
ನಂಬಿಯಪಂಡ ತಂಡವು ಬಾಚರಣಿಯಂಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು.
ಬಾಚಿನಾಡಂಡ ತಂಡವು 2-1 ಗೋಲುಗಳ ಅಂತರದಲ್ಲಿ ಚಾರಿಮಂಡವನ್ನು ಮಣಿಸಿತು.
ನಾಟೋಳಂಡ ತಂಡವು ತಿರೋಡಿರವನ್ನು 3-1 ಗೋಲುಗಳಿಂದ ಮಣಿಸಿತು.
ಪಾಲಚಂಡ ತಂಡವು ಮಾಚಂಗಡದ ವಿರುದ್ಧ 1-0 ಗೋಲುಗಳಿಂದ ಜಯ ಸಾಧಿಸಿತು.