ಗೋಣಿಕೊಪ್ಪಲು, ಏ. 11: ಬಸ್ ಕಾರ್ಮಿಕನೋರ್ವನ ಮೇಲೆ ಖಾಸಗಿ ಬಸ್ ಚಾಲಕ ಪ್ರವೀಣ್ ಎಂಬಾತ ಚಾಕುವಿನಿಂದ ಇರಿದ ಘಟನೆ ನಗರದ ಬಸ್ ನಿಲ್ದಾಣದ ಬೇಕರಿ ಮುಂಭಾಗದಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ 4ನೇ ವಿಭಾಗದ ನಿವಾಸಿಯಾಗಿದ್ದಾನೆ. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಲೋಡರ್ ಕೆಲಸ ಮಾಡುತ್ತಿರುವ ಷಂಶೀರ್ (45) ಗಂಭೀರ ಗಾಯಗೊಂಡಿದ್ದಾನೆ.

ಕಳೆದ 2 ತಿಂಗಳ ಹಿಂದೆ ಖಾಸಗಿ ಬಸ್ ಚಾಲಕ ಪ್ರವೀಣ್ ಹಾಗೂ ಶಂಸೀರ್ ನಡುವೆ ಕ್ಷುಲ್ಲಕ ವಿಚಾರಕ್ಕೆ ನಿಲ್ದಾಣದಲ್ಲಿ ಗಲಾಟೆಯಾಗಿತ್ತು. ಕಾರ್ಮಿಕ ಷಂಶೀರ್ ಬಸ್ಸಿನ ಟಯರ್ ಬಿಚ್ಚಲು ಬಳಸುವ ಕಬ್ಬಿಣದ ರಾಡನ್ನು ಬಸ್ಸಿನಿಂದ ತೆಗೆದು ನಂತರ ಅದನ್ನು ವಾಪಸು ನೀಡದೆ 2 ತಿಂಗಳಿನಿಂದ ಸತಾಯಿಸುತ್ತಲೇ ಬಂದಿದ್ದ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಿಂದ್ದಾಗೆ ಮಾತಿನ ಚಕಮಕಿ ನಡೆಯುತ್ತಲೇ ಬಂದಿತ್ತು. 4ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಳೆದ 2 ದಿನಗಳ ಹಿಂದೆ ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬಸ್ ನಿಲ್ದಾಣದಲ್ಲಿ ಷಂಶೀರ್ ಎದುರುಗೊಂಡಿದ್ದಾನೆ. ಮತ್ತೆ ಅದೇ ಮಾತು ಮುಂದುವರೆದಿದೆ. ಈ ವೇಳೆ ಬಸ್ ಚಾಲಕ ಪ್ರವೀಣ್ ಆತನ ಬಳಿ ಇದ್ದ ಚಾಕುವಿನಿಂದ ಷಂಶೀರ್‍ನÀ ಹೊಟ್ಟೆಭಾಗಕ್ಕೆ ಇರಿದಿದ್ದಾನೆ. ಇದರಿಂದ ರಕ್ತಸ್ರಾವಗೊಂಡ ಷಂಶೀರ್‍ನನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾರ್ವಜನಿಕರು ಸಾಗಿಸಿದ್ದಾರೆ.

ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಕು ಇರಿದ ಆರೋಪಿ ಬಸ್ ಚಾಲಕ ಪ್ರವೀಣ್ ತಲೆಮರೆಸಿಕೊಂಡಿದ್ದು ಪೊಲೀಸರು ಈತನ ಹುಡುಕಾಟದಲ್ಲಿ ತೊಡಗಿದ್ದಾರೆ.