ಶ್ರೀಮಂಗಲ, ಏ. 10: ಪೆÇನ್ನಂಪೇಟೆ ತಾಲೂಕು ಬಿರುನಾಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆÇರಾಡ್ ಗ್ರಾಮದಲ್ಲಿ ರೆಸಾರ್ಟ್, ಹೋಂಸ್ಟೇ ಸ್ಥಾಪನೆಗೆ ಅವಕಾಶ ನೀಡದಿರಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದಾರೆ.

ಊರೋರ್ಮೆಯಲ್ಲಿ ಈ ಹಿಂದೆಯೇ ಈ ಬಗ್ಗೆ ಕೈಗೊಂಡ ನಿರ್ಣಯವನ್ನು ಸರ್ವಾನುಮತದಿಂದ ಎತ್ತಿಹಿಡಿಯುವ ಮೂಲಕ ಪ್ರವಾಸೋದ್ಯಮ ಗ್ರಾಮಕ್ಕೆ ಮಾರಕವಾಗಲಿದೆ ಎಂಬ ಮುನ್ನೆಚ್ಚರಿಕೆಯಿಂದ ಈ ನಿರ್ಣಯವನ್ನು ಗ್ರಾಮದ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಊರಿನ ಅಂಬಲದಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ಕೈಗೊಂಡಿದ್ದಾರೆ.

ನಿರ್ಣಯದ ಪ್ರತಿಯನ್ನು ಬಿರುನಾಣಿÉ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಮ್ಮತ್ತಿರ ರಾಜೇಶ್ ಹಾಗೂ ಪಿಡಿಒ ಪ್ರಕಾಶ್ ಮತ್ತು ಶ್ರೀಮಂಗಲ ಪೆÇಲೀಸ್ ಠಾಣಾಧಿಕಾರಿ ರವೀಂದ್ರ ಅವರುಗಳಿಗೆ ಸಲ್ಲಿಸಲಾಗಿದೆ.

15 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಯಾವುದೇ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ನಿರಾಪೇಕ್ಷಣ ಪತ್ರವನ್ನು ನೀಡದಂತೆ ಗ್ರಾಮಸ್ಥರು ಮನವಿ ಮಾಡಿದ್ದು ಅದರಂತೆ ಇದುವರೆಗೆ ಯಾವುದೇ ರೆಸಾರ್ಟ್ ಹಾಗೂ ಹೋಂ ಸ್ಟೇಗೆ ನಿರಾಪೇಕ್ಷಣ ಪತ್ರವನ್ನು ನೀಡಿಲ್ಲ ಎಂದು ಗ್ರಾಮಕ್ಕೆ ಆಗಮಿಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಪಿಡಿಒ ಸ್ಪಷ್ಟಪಡಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯಿಂದಲೂ ನಿರ್ಣಯ ಕೈಗೊಳ್ಳಲಾಗಿದ್ದು, ಇದನ್ನು ಪೆÇರಾಡ್ ಗ್ರಾಮದಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಿಸುತ್ತಿರುವ ಮಾಲೀಕರಿಗೆ ಸ್ಥಳದಲ್ಲಿ ವಿತರಿಸಿ ತಿಳುವಳಿಕೆ ನೀಡಿದರು. ಠಾಣಾಧಿಕಾರಿ, ಗ್ರಾ. ಪಂ. ಅಧ್ಯಕ್ಷರು ಮತ್ತು ಪಿಡಿಓ ಅವರು ಹೋಮ್ ಸ್ಟೇ, ರೆಸಾರ್ಟ್ ಮಾಲೀಕರಿಗೆ ಗ್ರಾಮಸ್ಥರ ವಿರೋಧ, ಪಂಚಾಯಿತಿಯಿಂದ ನಿರಾಪೇಕ್ಷಣ ಪತ್ರ ಪಡೆಯದೆ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದು 4ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸರಿಯಲ್ಲ ಹಾಗೂ ಅದನ್ನು ನಡೆಸುತ್ತಿರುವುದು ಸಹ ಕಾನೂನು ಬಾಹಿರ ರೆಸಾರ್ಟ್ ಹಾಗೂ ಸಂಸ್ಥೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.

ಗ್ರಾಮಸ್ಥರ ಅಹವಾಲು

ನೂರರಷ್ಟು ಇಲ್ಲಿನ ಮೂಲ ನಿವಾಸಿಗಳು ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದು ಸ್ಥಳೀಯರು ಯಾರು ಪ್ರವಾಸೋದ್ಯಮದ ಮೂಲಕ ಬದುಕು ಅವಲಂಬಿಸಿಲ್ಲ. ಗ್ರಾಮವು ರೆಸಾರ್ಟ್, ಹೋಂ ಸ್ಟೇ ಮುಕ್ತವಾಗಿದೆ.ಆದರೆ ಇತ್ತೀಚೆಗೆ ಕೆಲವರು ಗ್ರಾಮದ ನಿವಾಸಿ ಅಲ್ಲದವರು ಗ್ರಾಮದಲ್ಲಿ ಆಸ್ತಿಯನ್ನು ಖರೀದಿಸಿ ರೆಸಾರ್ಟ್ ಹೋಂಸ್ಟೇ ಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದು ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಪ್ರವಾಸೋದ್ಯಮದಿಂದ ಗ್ರಾಮದಲ್ಲಿ ಅನೈತಿಕ ಚಟುವಟಿಕೆ, ಗ್ರಾಮಸ್ಥರ ಪ್ರಶಾಂತತೆಗೆ ಧಕ್ಕೆ,ಪರಿಸರ ಹಾನಿ, ತ್ಯಾಜ್ಯಗಳ ಸಂಗ್ರಹ, ಶಬ್ದ, ಜಲ ಮಾಲಿನ್ಯ, ಸ್ಥಳೀಯರು ಹಾಗೂ ಪ್ರವಾಸಿಗಳ ನಡುವೆ ಸಂಘರ್ಷ ಸೇರಿದಂತೆ, ಮಾದಕ ವಸ್ತು ಸರಬರಾಜು, ಇಲ್ಲಿನ ಧಾರ್ಮಿಕ ಪವಿತ್ರತೆಗಳಿಗೂ ಸಹ ಧಕ್ಕೆಯಾಗುವ ನಿಟ್ಟಿನಲ್ಲಿ ಮತ್ತು ಅಕ್ರಮ ಚಟುವಟಿಕೆ ಮತ್ತು ಅಭದ್ರತೆ ನಿಟ್ಟಿನಲ್ಲಿ ಇಂತಹ ಯಾವುದೇ ರೆಸಾರ್ಟ್ ಹಾಗೂ ಹೋಂ ಸ್ಟೇ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಯಿಂದ ಯಾವುದೇ ನಿರಾಪೇಕ್ಷಣ ಪತ್ರ ನೀಡದಂತೆ ಹಾಗೂ ಈ ಮೂಲಕ ಶ್ರೀಮಂಗಲ ಪೆÇಲೀಸ್ ಠಾಣಾಧಿಕಾರಿಗಳಿಗೂ ಸಹ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಗ್ರಾಮದ ಸುತ್ತ ಪರಿಶುದ್ಧವಾದ ನದಿ ಆವರಿಸಿದ್ದು, ಗ್ರಾಮದ ಪೂರ್ವಿಕರು ಗ್ರಾಮದಲ್ಲಿ 3 ದೇವರಕಾಡನ್ನು ಸಂರಕ್ಷಿಸುತ್ತ ಪರಿಸರವನ್ನು ಕಾಪಾಡಿದ್ದಾರೆ,ಇಂತಹ ನದಿ, ಪರಿಸರ ಪ್ರವಾಸಿಗರ ಮೋಜು ಮಸ್ತಿಗೆ ಹಾಳಾಗುವುದು ಬೇಡ ಎಂದ ಗ್ರಾಮಸ್ಥರು, ಅತ್ಯಂತ ಶಾಂತಿಯುತ ಗ್ರಾಮ ಹೊರಗಿನವರ ಆಗಮನದಿಂದ ಅಶಾಂತಿಗೆ ಹೋಗುವುದು ಬೇಡ. ಇದೀಗ ಪ್ರಭಾವಿಗಳು ಗ್ರಾಮದಲ್ಲಿ ಜಾಗ ಖರೀದಿಸಿ ತಮ್ಮ ಪ್ರಭಾವಬಳಸಿ ರೆಸಾರ್ಟ್ ಮಾಡಲು ಮುಂದಾಗಿದ್ದಾರೆ. ಗ್ರಾಮಸ್ಥರು ಯಾರೂ ಸಹ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡು ತಮ್ಮ ಆರ್ಥಿಕ ಸಂಪನ್ಮೂಲವನ್ನು ಪಡೆಯುತ್ತಿಲ್ಲ. ಕೃಷಿ ಪ್ರಧಾನವಾದ ಗ್ರಾಮ ಅದಕ್ಕೆ ಪೂರಕವಾಗಿಯೇ ಮುಂದುವರೆಯಲಿ ಎಂದು ಗ್ರಾಮಸ್ಥರು ಆಗ್ರಹಿಸಿದರು ಈಗಾಗಲೇ ಗ್ರಾಮದಲ್ಲಿ ಕೆಲವರು ಹೋಂ ಸ್ಟೇ, ರೆಸಾರ್ಟ್ ಸ್ಥಾಪಿಸಲು ಬೃಹತ್ ಯಂತ್ರಗಳಿಂದ ಮಣ್ಣನ್ನು ಕೊರೆಯುತ್ತಿದ್ದು ಗುಡ್ಡ ಪ್ರದೇಶದಲ್ಲಿ ಭೂಕುಸಿತ ಉಂಟಾಗುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಇದನ್ನು ಕೂಡಲೇ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಗ್ರಾಮದ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಉಪಾಧ್ಯಕ್ಷ ಅಣ್ಣೀರ ಪೆಮ್ಮಯ್ಯ, ಕಾರ್ಯದರ್ಶಿ ಮೀದೇರಿರ ಹರೀಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.