ಕೂಡಿಗೆ, ಏ. 10: ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ, ಶ್ರೀ ಮುತ್ತತ್ತಿರಾಯ ದೇವಸ್ಥಾನ ಹಾಗೂ ಗ್ರಾಮ ದೇವಾ ಸಮಿತಿ ವತಿಯಿಂದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವದ ಮೊದಲ ಭಾಗವಾಗಿ ತಾ. 20 ರಂದು ಶ್ರೀ ಬಸವೇಶ್ವರ ದೇವರ ವಾನ್ಯ ಮೆರವಣಿಗೆ ನಡೆಯಲಿದೆ.

ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ನಂತರ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು ತಿಳಿಸಿದ್ದಾರೆ.