ಸುಂಟಿಕೊಪ್ಪ, ಏ. 10: ಪಟ್ಟಣದಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಯಮ ಉಲ್ಲಂಘಿಸಿದ ವರ್ತಕರಿಗೆ ದಂಡ ವಿಧಿಸಲಾಯಿತು.
ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ತಂಬಾಕು ತನಿಖಾ ತಂಡವು ಸುಂಟಿಕೊಪ್ಪದ ನಗರಾದ್ಯಂತ ಅಂಗಡಿ, ಹೊಟೇಲ್, ಬೇಕರಿ ಹಾಗೂ ಮದ್ಯದಂಗಡಿಗಳಿಗೆ ಭೇಟಿ ನೀಡಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಸೇವನೆ ಮಾಡುವುದು ಹಾಗೂ ಅಪ್ರಾಪ್ತರಿಗೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ನಾಮಪಲಕಗಳನ್ನು ಅಳವಡಿಸುವಂತೆ ಸೂಚಿಸಿ ಅಳವಡಿಸಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ ತಂಡವು ನಿಯಮ ಉಲ್ಲಂಘಿಸಿದ 13 ಪ್ರಕರಣಗಳಿಂದ ರೂ 2300 ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಜಿಲ್ಲಾ ಸಂಯೋಜಕಿ ಪುನೀತ, ಸಮುದಾಯ ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ್ ಹಾಗೂ ಆರಕ್ಷಕ ಆಕಾಶ್ ಪಾಲ್ಗೊಂಡಿದರು.