ಮಡಿಕೇರಿ, ಏ. 10: ಮಡಿಕೇರಿ ದಸರಾ ಸಂದರ್ಭ ದಶಮಂಟಪ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ದೇವಾಲಯ ಸಮಿತಿಗಳ ನಡುವಿನ ಲೀಗ್ ಮಾದರಿಯ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ - ದಶಮಂಟಪ ಪ್ರೀಮಿಯರ್ ಲೀಗ್‍ಗೆ ಇಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರಕಿತು.

ಮೊದಲ ಪಂದ್ಯದಲ್ಲಿ ಭಗವತಿ-ಎ ತಂಡವು ಭಗವತಿ-ಬಿ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಭಗವತಿ-ಬಿ ತಂಡವು ನಿಗದಿತ 5 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 42 ರನ್‍ಗಳನ್ನು ಪೇರಿಸಿತು. ಇದನ್ನು ಬೆನ್ನಟ್ಟಿದ ಭಗವತಿ-ಎ ತಂಡ 3.4 ಓವರ್‍ಗಳಲ್ಲಿ 2 ವಿಕೆಟ್‍ಗಳ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.

2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಮಾಕ್ಷಿ-ಎ ತಂಡ 5 ಓವರ್‍ಗಳಲ್ಲಿ 5 ವಿಕೆಟ್‍ಗಳ ನಷ್ಟಕ್ಕೆ 58 ರನ್‍ಗಳನ್ನು ಬಾರಿಸಿತು. ಇದನ್ನು ಬೆನ್ನಟ್ಟಿದ ಕೆ.ಆರ್.ಟಿ ತಂಡ 5 ಓವರ್‍ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು 27 ರನ್‍ಗಳನ್ನಷ್ಟೇ ಗಳಿಸಿ ಸೋಲನುಭವಿಸಿತು.

3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಗವತಿ -ಎ ತಂಡವು 5 ಓವರ್‍ಗಳಲ್ಲಿ 7 ವಿಕೆಟ್‍ಗಳನ್ನು ಕಳೆದುಕೊಂಡು 24 ರನ್‍ಗಳನ್ನು ಪೇರಿಸಿತು. ಇದನ್ನು ಬೆನ್ನಟಿದ ಕಾಮಾಕ್ಷಿ-ಎ ತಂಡವು 3 ವಿಕೆಟ್‍ಗಳ ನಷ್ಟಕ್ಕೆ 3.5 ಓವರ್‍ಗಳಲ್ಲಿ ಗುರಿ ಸಾಧಿಸಿತು.

4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆ.ಆರ್.ಟಿ-ಎ ತಂಡ 5 ಓವರ್‍ಗಳಲ್ಲಿ 3 ವಿಕೆಟ್‍ಗಳ ನಷ್ಟಕ್ಕೆ 24 ರನ್ ಗಳಿಸಿತು. 2.3 ಓವರ್‍ಗಳಲ್ಲಿ 1 ವಿಕೆಟ್‍ಗಳ ನಷ್ಟಕ್ಕೆ ಈ ಗುರಿಯನ್ನು ಭಗವತಿ-ಬಿ ತಂಡ ಸಾಧಿಸಿತು.

ಭಗವತಿ-ಬಿ ಹಾಗೂ ಕಾಮಾಕ್ಷಿ-ಎ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಗವತಿ-ಬಿ ತಂಡ 3 ವಿಕೆಟ್‍ಗಳ ನಷ್ಟಕ್ಕೆÀ 36 ರನ್‍ಗಳನ್ನು ಗಳಿಸಿತು. ಕಾಮಾಕ್ಷಿ-ಎ ತಂಡ 4.1 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ಬೆನ್ನಟ್ಟಿತು.

6ನೇ ಪಂದ್ಯದಲ್ಲಿ ಭಗವತಿ-ಎ ತಂಡ 1 ವಿಕೆಟ್ ನಷ್ಟಕ್ಕೆ 68 ರನ್‍ಗಳನ್ನು ಬಾರಿಡಸಿತು. ಕೆ.ಆರ್.ಟಿ-ಎ ತಂಡ 4 ವಿಕಟ್‍ಗಳನ್ನು ಕಳೆದುಕೊಂಡು 23 ರನ್ ಗಳಿಸಿ ಸೋಲನುಭವಿಸಿತು.

ಇಂದು ಹಾಗೂ ನಾಳೆ ಕೂಡ ಪಂದ್ಯಗಳು ನಡೆಯಲಿದ್ದು, ತಾ.12(ನಾಳೆ) ಸಂಜೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ.

ಪಂದ್ಯಾವಳಿಗೆ ಇಂದು ಚಾಲನೆ ನೀಡುವ ಸಂದರ್ಭ ಆಯೋಜಕರಾದ ಟೀಂ ಕೆ.ಆರ್.ಟಿ ತಂಡ, ದಾನಿಗಳಾದ ಉದ್ಯಮಿ ಜಯಂತಿ ಶೆಟ್ಟಿ, ಜ್ಯೋತಿ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ್, ಸದಸ್ಯರಾದ ವಿಜು, ಮಹೇಶ್ ಹಾಗೂ ಇತರರು, ಕೋದಂಡರಾಮ ದೇವಾಲಯ ರಾಮ ಸೇವಾ ಸಮಿತಿ ಅಧ್ಯಕ್ಷರಾದ ಗೋಪಿನಾಥ್, ದೇವಾಲಯ ಸಮಿತಿ ಟ್ರಸ್ಟಿ ಮಂಜುನಾಥ್, ‘ಶಕ್ತಿ’ ಸಹಾಯಕ ಸಂಪಾದಕ ಪ್ರಜ್ವಲ್ ಜಿ.ಆರ್, ಕಿಂಬರ್ಲಿ ಕೂರ್ಗ್‍ನ ಮದನ್ ಹಾಗೂ ಇತರ ಪ್ರಮುಖರು ಹಾಜರಿದ್ದರು.