ಮಡಿಕೇರಿ, ಏ. 10: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ಉದಿಯಂಡ, ಪೋರಂಗಡ, ಚಾಮೆರ ತಂಡಗಳ ಪರ ಪುಟಾಣಿ ಪ್ರತಿಭೆಗಳು ಆಟವಾಡಿ ಗಮನ ಸೆಳೆದರು.

ಪೊನ್ನೋಲತಂಡ ತಂಡವು ಬೊಳ್ಳಿಯಂಡವನ್ನು 3-0 ಗೋಲುಗಳಿಂದ ಸೋಲಿಸಿತು.

ಪೋರಂಗಡ ತಂಡವು ಮಾದೇಟಿರ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು.

ನಂದೇಟಿರ ತಂಡವು ಪಟ್ರಪಂಡವನ್ನು 2-0 ಗೋಲುಗಳಿಂದ ಮಣಿಸಿತು.

ಮೇದುರ ತಂಡವು ಕಳ್ಳೇಂಗಡ(ಬೆಳ್ಳೂರು)ವನ್ನು 1-0 ಗೋಲುಗಳಿಂದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಮುಕ್ಕಾಟಿರ(ಮೂವತ್ತೊಕ್ಲು) ತಂಡವು ತಂಬುಕುತ್ತಿರ ತಂಡವನ್ನು ಟೈ ಬ್ರೇಕರ್‍ನಲ್ಲಿ 3-2 ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ 0-0 ಸಮಬಲವಾಗಿತ್ತು.

ಮಚ್ಚಂಡ ತಂಡವು ಚಾವಂಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು.

ವಾಂಚಿರ ತಂಡವು ಮೊರ್ಕಂಡ ತಂಡವನ್ನು 1-0 ಅಂತರದಲ್ಲಿ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಚಾಮೆರ - ಕುಂಜಿಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಾಮೆರಕ್ಕೆ ವಾಕ್‍ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.

ಅಪ್ಪಾರಂಡ ತಂಡವು ತಾಪಂಡ ತಂಡದ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿತು.

ಉದಿಯಂಡ ತಂಡವು ಬೊಳ್ಳಿಮಾಡ ತಂಡವನ್ನು 3-0 ಗೋಲುಗಳಿಂದ ಮಣಿಸಿತು.

ಕೆಚ್ಚೆಟ್ಟಿರ ತಂಡವು ಮಾಪಣಮಾಡ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿತು.

ಪಳಂಗಿಯಂಡ ತಂಡವು ಬೈರೇಟಿರ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು.

ಕಲ್ಲೇಂಗಡ (ನಾಪೋಕ್ಲು) ತಂಡವು ಚೊಟ್ಟೇಂಗಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು.

ಕಬ್ಬಚ್ಚಿರ ತಂಡವು ದೇಯಂಡವನ್ನು 4-1 ಗೋಲುಗಳಿಂದ ಸೋಲಿಸಿತು.

ಮಂದೆಯಂಡ ತಂಡವು ಚೆಯ್ಯಂಡ(ಮುಗುಟಗೇರಿ) ತಂಡವನ್ನು 4-0 ಅಂತರದಲ್ಲಿ ಮಣಿಸಿತು. ಪುಳ್ಳಂಗಡ ತಂಡವು ಚೆರುಮಂದಂಡ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿತು.

ತೀತರಮಾಡ ತಂಡವು ಬಯವಂಡವನ್ನು 4-3 ಗೋಲುಗಳಿಂದ ಮಣಿಸಿತು.

ಮುದ್ದಂಡ ತಂಡವು ಬಟ್ಟಿಯಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ 5-4 ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ 1-1 ಸಮಬಲ ಸಾಧನೆಯಾಗಿತ್ತು.

ತೇಲಪಂಡ ತಂಡವು ನಂದಿನೆರವಂಡ ತಂಡವನ್ನು ಟೈ ಬ್ರೇಕರ್‍ನಲ್ಲಿ 3-1 ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯದಲ್ಲಿ 1-1 ಸಮಬಲ ಸಾಧನೆಯಾಗಿತ್ತು.

ಪಾಲೆಕಂಡ ತಂಡವು ಪಾರುವಂಗಡವನ್ನು 1-0 ಗೋಲುಗಳಿಂದ ಮಣಿಸಿತು.