ನಾಪೆÇೀಕ್ಲು, ಏ. 9: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಮಹೋತ್ಸವದ ಅಂಗವಾಗಿ ಅಂದಿಬೊಳಕ್, ದೇವರ ಬಲಿ, ಮಹಾಪೂಜೆ, ದೇವರ ನೃತ್ಯ ಬಲಿ, ಅಲಂಕಾರ ಪೂಜೆ. ಮಹಾಪೂಜೆ ಬಳಿಕ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಂಗಳವಾರದಂದು ಅಲಂಕಾರ ಪೂಜೆ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವರ ಕಟ್ಟು ಸಡಿಲಿಸಿದ ಬಳಿಕ ದೇವಿಯ ಅವಭೃತ ಸ್ನಾನ ಜರುಗಿತು. ಸಂಜೆ ದೇವಿಯ ದರ್ಶನ ಬಳಿ ನಂತರ ವಸಂತ ಪೂಜೆ, ಅನ್ನ ಸಂತರ್ಪಣೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.
ಸುರೇಶ್, ಸುಧೀರ್ ಭಟ್ ತಂತ್ರಿ, ರಮೇಶ್ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.