ಪೆÇನ್ನಂಪೇಟೆ, ಏ. 9: ಪೆÇನ್ನಂಪೇಟೆ ಸಮೀಪದ ಮುಗುಟಗೇರಿಯ ಶ್ರೀ ತೊಣಕೇರಿ ಭಗವತಿ ದೇವರ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಗಣಪತಿ ಹೋಮ, ಚಂಡೆ ಮದ್ದಳೆ ಸಹಿತ ಮಹಾಪೂಜೆ ನೆರವೇರಿಸಲಾಯಿತು. ವಿವಿಧ ಗ್ರಾಮಗಳಿಂದ ಬಂದ ಭಕ್ತಾದಿಗಳು ದೇವರಿಗೆ ಹರಕೆ ಒಪ್ಪಿಸಿ, ವಿವಿಧ ಪೂಜೆಗಳನ್ನು ಮಾಡಿಸಿ ಪುನೀತರಾದರು. ನಂತರ ಅರ್ಚಕ ಅಶೋಕ್ ಭಟ್ ಭದ್ರಕಾಳಿ ದೇವಿಯ ಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕಳ್ಳಿಚಂಡ ಶಂಭು ಪೂವಯ್ಯ ಮಾತನಾಡಿ, ಭಗವತಿ ದೇವಸ್ಥಾನದ ವಾರ್ಷಿಕೋತ್ಸವದೊಂದಿಗೆ ಗ್ರಾಮದ ಉತ್ಸವಕ್ಕೆ ಚಾಲನೆ ದೊರೆತಿದ್ದು, ತಾ. 21 ರಂದು ಧಾರ್ಮಿಕ ಕಾರ್ಯ, ತಾ. 27 ಹಾಗೂ 28 ರಂದು ಇಲ್ಲಿನ ಪ್ರಸಿದ್ಧ ಕುಟ್ಟಿಚಾತ ದೇವರ ತೆರೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದರು. ನೆರೆದಿದ್ದ ನೂರಾರು ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.