ಕಣಿವೆ, ಏ. 9: ಇಲ್ಲಿನ ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅರ್ಚಕರಾದ ಕೃಷ್ಣಮೂರ್ತಿ ಭಟ್ ಹಾಗೂ ಗಿರೀಶ್ ಭಟ್ ನೇತೃತ್ವದ ತಂಡ ಮುಂಜಾನೆಯಿಂದ ದೇವಾಲಯದಲ್ಲಿ ಧಾರ್ಮಿಕ ವಿಧಿ ಪೂರೈಸಿದರು. ಮಧ್ಯಾಹ್ನ ಕನ್ನಂಬಾಡಮ್ಮ ದೇವರ ವಿಗ್ರಹಕ್ಕೆ ವಿವಿಧ ಅಭಿμÉೀಕಗಳನ್ನು ಮಾಡಿ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು. ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೆರೆದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿ ವತಿಯಿಂದ ಅನ್ನದಾನ ನೆರವೇರಿತು. ಇದೇ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ಸಮಿತಿಯ ಪದಾಧಿಕಾರಿಗಳನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮದ ಹಿರಿಯರಾದ ಎಂ.ಕೆ.ರಾಜು, ದೇವಾಲಯ ಸಮಿತಿ ಅಧ್ಯಕ್ಷರಾದ ಎಂ.ಹೆಚ್.ಅಣ್ಣೇಗೌಡ, ಉಪಾಧ್ಯಕ್ಷ ಎಂ..ಆರ್.ನಂಜುಂಡ, ಕಾರ್ಯದರ್ಶಿ ಆರ್.ಪ್ರವೀಣ್, ಖಜಾಂಚಿ ಎಂ.ವಿ.ದಾಸೇಗೌಡ, ನಿರ್ದೇಶಕರಾದ ಎಂ. ಪಳನಿಸ್ವಾಮಿ, ಎಂ.ಟಿ. ರಘು, ಎಂ.ಆರ್. ಮಹದೇವಪ್ಪ, ಎಂ.ಸಿ. ಸಂತೋμï, ಎಂ.ಹೆಚ್. ಚಂದ್ರಪ್ಪ, ವಿ.ಎ. ದಿನೇಶ್, ಎಂ.ಕೆ. ಚಂದ್ರು, ಎಂ.ಬಿ. ಸುರೇಶ್, ಎಂ.ಎಸ್. ಪ್ರಸನ್ನ, ರಂಗಸ್ವಾಮಿ ಇದ್ದರು. ದೀಪ ಹಾಗೂ ದಿವ್ಯ ಸ್ವಾಗತಿಸಿ, ವಂದಿಸಿದರು