ಮಡಿಕೇರಿ, ಏ. 9 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಚೊಟ್ಟಂಗಡ ಹಾಗೂ ಮಚ್ಚಮಾಡ ತಂಡಗಳು ಭರ್ಜರಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದವು.

ಮೈದಾನ 1ರಲ್ಲಿ ನಡೆದ ಮುಕ್ಕಾಟಿರ (ಕಡಗದಾಳು) ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ 9 ವಿಕೆಟ್‍ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ತಂಡ 6 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿತು. ಕನ್ನಂಡ 2.4 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ ಗೆಲುವಿನ ನಗು ಬೀರಿತು.

ಮಂಡೀರ (ನೆಲಜಿ) ಮತ್ತು ಕೆಚ್ಚೆಟ್ಟಿರ (ಬೇಗೂರು) ನಡುವಿನ ಪಂದ್ಯದಲ್ಲಿ ಮಂಡೀರ 3 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಡೀರ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ಕೆಚ್ಚೆಟ್ಟಿರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮೀದೇರಿರ ಮತ್ತು ಕಂಜಿತಂಡ ನಡುವಿನ ಪಂದ್ಯದಲ್ಲಿ ಮೀದೇರಿರ 2 ರನ್‍ಗಳಿಂದ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೀದೇರಿರ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು. ಕಂಜಿತಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೇತಿರ ಮತ್ತು ಕೋಳುಮಾಡಂಡ (ಅರ್ವತ್ತೊಕ್ಲು) ತಂಡಗಳ ನಡುವಿನ ಪಂದ್ಯದಲ್ಲಿ ಕೋಳುಮಾಡಂಡ 34 ರನ್‍ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಳುಮಾಡಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತು. ಕೇತಿರ 6 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 35 ರನ್ ಗಳಿಸಿ ಸೋಲಿಗೆ ಶರಣಾಯಿತು.

ನಡಿಕೇರಿಯಂಡ ಮತ್ತು ಚೊಟ್ಟಂಗಡ ನಡುವಿನ ಪಂದ್ಯದಲ್ಲಿ ಚೊಟ್ಟಂಗಡ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಡಿಕೇರಿಯಂಡ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 32 ರನ್ ಸೇರಿಸಿತು. ಚೊಟ್ಟಂಗಡ ತಂಡ ಕೇವಲ 2.3 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 34 ರನ್ ಬಾರಿಸಿ ಜಯ ಸಾಧಿಸಿತು. ಕಾಂಡೇರ ಮತ್ತು ಮಂದನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡೇರ 18 ರನ್‍ಗಳಿಂದ ವಿಜಯ ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾಂಡೇರ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಮಂದನೆರವಂಡ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 56 ರನ್‍ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.

ಮೈದಾನ 2ರಲ್ಲಿ ಚೇಂದಂಡ ಮತ್ತು ಮಾತಂಡ ತಂಡಗಳ ನಡುವಿನ ಹಣಾಹಣಿಯಲ್ಲಿ ಚೇಂದಂಡ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಚೇಂದಂಡ 4.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತು. ಮಾತಂಡ 6 ಓವರ್‍ಗಳಲ್ಲಿ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 36 ರನ್ ಸೇರಿಸಿ ಸೋಲು ಅನುಭವಿಸಿತು.

ಅಜ್ಜಿನಿಕಂಡ ಮತ್ತು ತೀತಮಾಡ (ಕುಂದ) ನಡುವಿನ ಪಂದ್ಯದಲ್ಲಿ ತೀತಮಾಡ 9 ವಿಕೆಟ್‍ಗಳಿಂದ ಜಯ ಸಾಧಿಸಿತು. ಅಜ್ಜಿನಿಕಂಡ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 49 ರನ್ ಸೇರಿಸಿತು. ತೀತಮಾಡ ಕೇವಲ 2.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್‍ಗಳೊಂದಿಗೆ ಗೆಲುವು ಕಂಡಿತು. ತಡಿಯಂಗಡ ಮತ್ತು ಚೆರುವಾಳಂಡ (ಪಾಲೂರು) ತಂಡಗಳ ನಡುವಿನ ಪಂದ್ಯದಲ್ಲಿ ಚೆರುವಾಳಂಡ 7 ವಿಕೆಟ್‍ಗಳ ಗೆಲುವು ದಾಖಲಿಸಿತು. ತಡಿಯಂಗಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು. ಚೆರುವಾಳಂಡ 5 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 62 ರನ್ ಸೇರಿಸಿ ಜಯ ಸಾಧಿಸಿತು.

ಚಾಮೆರ ಮತ್ತು ಚೋನೀರ ನಡುವಿನ ಪಂದ್ಯದಲ್ಲಿ ಚಾಮೇರ 13 ರನ್‍ಗಳಿಂದ ಜಯ ದಾಖಲಿಸಿತು. ಚಾಮೇರ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಸೇರಿಸಿತು. ಚೋನೀರ 6 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 66 ರನ್ ಗಳಿಸಿ ಸೋಲನುಭವಿಸಿತು.

ನಾಳಿಯಂಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ ಆಲೆಮಾಡ 7 ವಿಕೆಟ್‍ಗಳ ಜಯ ಸಾಧಿಸಿತು. ನಾಳಿಯಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 65 ರನ್ ಸೇರಿಸಿತು. ಆಲೆಮಾಡ 5.2 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿ ಗೆಲುವು ಕಂಡಿತು.

ಬಲ್ಲಿಮಾಡ ಮತ್ತು ಮಚ್ಚಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಚ್ಚಮಾಡ 10 ವಿಕೆಟ್‍ಗಳಿಂದ ವಿಜಯ ಸಾಧಿಸಿತು. ಬಲ್ಲಿಮಾಡ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿತು. ಮಚ್ಚಮಾಡ ಕೇವಲ 1.4 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 31 ರನ್ ಗಳಿಸಿ ಜಯಭೇರಿ ಬಾರಿಸಿತು ಬಡುವಂಡ ಮತ್ತು ಅರಮಣಮಾಡ (ಬೆಸಗೂರು) ನಡುವಿನ ಪಂದ್ಯದಲ್ಲಿ ಬಡುವಂಡ ತಂಡ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಅರಮಣಮಾಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 77 ರನ್ ಸೇರಿಸಿತು. ಬಡುವಂಡ 5.5 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿ ಜಯ ಕಂಡಿತು.