ಚೆಯ್ಯಂಡಾಣೆ, ಏ. 9: ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ ನಾಡು ಪೆÇನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ಉತ್ಸವ ತಾ. 14 ರಿಂದ 18ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾ. 14 ರ ಬೆಳಿಗ್ಗೆ 9 ಗಂಟೆಗೆ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಭಂಡಾರ ಆಗಮಿಸುದು, 10 ಗಂಟೆಗೆ ಎತ್ತು ಪೆÇೀರಾಟ, 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನದಾನ, ರಾತ್ರಿ 8 ಗಂಟೆಗೆ ಅಂದಿ ಬೊಳಕ್, 9 ಗಂಟೆಗೆ ಕಳಸ ಪೂಜೆ, 9.30 ಕ್ಕೆ ಮಹಾಪೂಜೆ, 10 ಗಂಟೆಗೆ ತೆಂಗಿನಕಾಯಿ ಪೆÇರುವುದು ನಡೆಯಲಿದೆ.

ತಾ. 15 ರಂದು ಬೆಳಿಗ್ಗೆ 7.30 ಕ್ಕೆ ಕಣಿಪೂಜೆ, 10ಕ್ಕೆ ವಿಶೇಷ ಪೂಜೆ, 10.30ಕ್ಕೆ ವಾರ್ಷಿಕ ಮಹಾಸಭೆ, 12.30 ಗಂಟೆಗೆ ಮಹಾಪೂಜೆ, 2 ಗಂಟೆಗೆ ದೇವತಕ್ಕರ ಮನೆಗೆ ಭಂಡಾರ ಹೊರಡುವುದು, ತಾ. 17 ರಂದು ಬೆಳಿಗ್ಗೆ 9 ಗಂಟೆಗೆ ಪುದಿಯೋದಿ ದೇವರಿಗೆ ಮೇಲೆರಿ ಸೌದೆ ಕಡಿಯುವುದು, ರಾತ್ರಿ 7.30ಕ್ಕೆ ದೇವತಕ್ಕರ ಮನೆಯಿಂದ ಭಂಡಾರ ಬರುವುದು, 10.30ಕ್ಕೆ ಮೊದಲ ತೋತ, 11.30ಕ್ಕೆ ಎರಡನೇ ತೋತ, 12 ಗಂಟೆಗೆ ಮೆಲೇರಿ ಅಗ್ನಿ ಹಾಕುವುದು, 12.30ಕ್ಕೆ ಮೂರನೇ ತೋತ, 1.30 ಗಂಟೆಗೆ ಬಿರಾಳಿ ತೆರೆ, 3.30 ಕ್ಕೆಪುದಿಯೋದಿ ತೆರೆ, ತಾ. 18 ರ ಬೆಳಿಗ್ಗೆ 8 ಗಂಟೆಗೆ ಭದ್ರಕಾಳಿ ತೆರೆ, 11 ಗಂಟೆಗೆ ತಕ್ಕರ ಮನೆಗೆ ಭಂಡಾರ ಹಿಂದಿರುಗಿಸುವ ಆಚರಣೆಗಳು ನೆರವೇರಲಿವೆ.