ಮಡಿಕೇರಿ, ಏ. 9: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ಕೊಲ್ಲಿರ ತಂಡವು 8 ಗೋಲುಗಳನ್ನು ಬಾರಿಸಿ ಭರ್ಜರಿ ಗೆಲುವು ದಾಖಲಿಸಿದರೆ, ಪುಗ್ಗೇರ-ಪೊನ್ನಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ 2 ತಂಡಗಳ ಆಟಗಾರರೂ ಹ್ಯಾಟ್ರಿಕ್ ಸಾಧನೆಗೈದರು.
ಅಜ್ಜಿನಂಡ ತಂಡವು ಕೋಡಿಮಣಿಯಂಡ ತಂಡವನ್ನು 4-2 ಟೈ ಬ್ರೇಕರ್‍ನಲ್ಲಿ ಸೋಲಿಸಿತು. ನಿಗದಿತ ಪಂದ್ಯದಲ್ಲಿ 2-2 ಸಮಬಲ ಸಾಧನೆಯಾಗಿತ್ತು. ನಾಯಕಂಡ ತಂಡವು ಅಚ್ಚಕಾಳೆರ ತಂಡವನ್ನು 5-0 ಗೋಲುಗಳಿಂದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಾಚಳ್ಳಿರ ತಂಡವು ನಾಗಚೆಟ್ಟಿರ ತಂಡವನ್ನು ಟೈ ಬ್ರೇಕರ್‍ನಲ್ಲಿ 3-1 ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯದಲ್ಲಿ 1-1 ಸಮಬಲವಾಗಿತ್ತು, ದಾಸಂಡ-ಚೋಡುಮಾಡ ನಡುವಿನ ಪಂದ್ಯದಲ್ಲಿ ದಾಸಂಡಕ್ಕೆ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ಕೊಟ್ಟಂಗಡ ತಂಡವು 5-0 ಗೋಲುಗಳಿಂದ ಮೇಕತಂಡವನ್ನು ಸೋಲಿಸಿತು. ಆಪಾಡಂಡ ತಂಡವು 1-0 ಗೋಲುಗಳ ಅಂತರದಲ್ಲಿ ಪಾಲೆಯಡ ವಿರುದ್ಧ ಜಯ ಸಾಧಿಸಿತು. ಕೊಲ್ಲಿರ ತಂಡವು ಬಲ್ಲಂಡ ವಿರುದ್ಧ ಭರ್ಜರಿ 8-0 ಗೋಲುಗಳಿಂದ ಜಯ ಸಾಧಿಸಿತು. ಕಲ್ಲುಮಾಡಂಡ ತಂಡವು ಪಾಂಡಂಡದ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮುಕ್ಕಾಟಿರ (ಕುಂಬಳದಾಳು) ತಂಡವು 2-0 ಗೋಲುಗಳ ಮೂಲಕ ಕುಯಿಮಂಡವನ್ನು ಮಣಿಸಿತು. ಮೂಡೆರ-ಮುಂಡಚಾಡಿರ ತಂಡದ ಪಂದ್ಯವು 2-2 ಸಮಬಲವಾಗಿ ಟೈ ಬ್ರೇಕರ್‍ನಲ್ಲಿ ಮೂಡೆರ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚೇಂದಿರ ತಂಡವು ತಾಣಚ್ಚಿರ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿತು. ಬಲ್ಟಿಕಾಳಂಡ ತಂಡವು ಕಳ್ಳೀರ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೊಜ್ಜಂಗಡ-ಚೇಂದ್ರಿಮಾಡ(ನಾಂಗಾಲ) ನಡುವಿನ ಪಂದ್ಯವು 2-2 ಸಮಬಲ ಸಾಧನೆಯಾಗಿ ಟೈ ಬ್ರೇಕರ್‍ನಲ್ಲಿ ಬೊಜ್ಜಂಗಡ ತಂಡವು 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪುಗ್ಗೇರ ತಂಡವು ಪೊನ್ನಚೆಟ್ಟಿರವನ್ನು 5-4 ಗೋಲುಗಳಿಂದ ಸೋಲಿಸಿತು.ಅರಮಣಮಾಡ ತಂಡವು ಅಜ್ಜೇಟಿರವನ್ನು 2-0 ಅಂತರದಲ್ಲಿ ಮಣಿಸಿತು. ಚೊಟ್ಟೆಯಂಡ ತಂಡವು 2-0 ಗೋಲುಗಳ ಅಂತರದಲ್ಲಿ ಬೊಳ್ಳಚೆಟ್ಟಿರ ತಂಡವನ್ನು ಸೋಲಿಸಿತು. ಕರ್ತಚ್ಚಿರ ತಂಡ ತಾತಪಂಡವನ್ನು 4-2 ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾದೆಯಂಡ ತಂಡವು ತಡಿಯಂಗಡ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿತು. ಚೆಟ್ಟಿಯಾರಂಡ ತಂಡದ ವಿರುದ್ಧ ಮೊಳ್ಳೇರ ತಂಡ ಟೈಬ್ರೇಕರ್‍ನಲ್ಲಿ 1-3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.