ಬೆಂಗಳೂರು, ಏ. 9: ಕೊಡಗಿನ ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಚಾರಣಿಗ ಯುವತಿ ಶರಣ್ಯ ದಾರಿ ತಪ್ಪಿ ನಂತರ ಪತ್ತೆಯಾದ ಬಳಿಕ ಮಂಗಳವಾರ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲೂ 15 ವರ್ಷದ ಬಾಲಕಿಯೊಬ್ಬಳು ಕಣ್ಮರೆ ಆಗಿದ್ದು ಆಕೆಗಾಗಿ ಅರಣ್ಯ ಹಾಗೂ ಪೆÇಲೀಸ್ ಇಲಾಖೆ ವತಿಯಿಂದ ಹುಡುಕಾಟ ನಡೆಯುತ್ತಿದೆ. ಈ ಬೆನ್ನಲ್ಲೇ ಎಚ್ಚತ್ತುಕೊಂಡಿರುವ ಕರ್ನಾಟಕ ಅರಣ್ಯ ಇಲಾಖೆ ಗಿರಿಶ್ರೇಣಿಗಳಲ್ಲಿ ಚಾರಣಕ್ಕೆ ಹೋಗುವವರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಚಾರಣಿಗರು ನಾಪತ್ತೆಯಾಗಿ ಅವರನ್ನು ಹುಡುಕಲು ಲಕ್ಷಗಟ್ಟಲೆ ರೂಪಾಯಿ ವೆಚ್ಚದ ಮಾನವ ಶ್ರಮ ವ್ಯರ್ಥವಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಮಾಣಿತ ಕಾರ್ಯವಿಧಾನ (Sಣಚಿಟಿಜಚಿಡಿಜ ಔಠಿeಡಿಚಿಣiಟಿg Pಡಿoಛಿeಜuಡಿe) ರೂಪಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ.
ಎರಡು ಮೂರು ವರ್ಷಗಳ ಹಿಂದೆ ಚಾರಣಿಗರ ಸಂಖ್ಯೆಗೆ ಕಡಿವಾಣ ಹಾಕಲು ಸರ್ಕಾರ ಆನ್ಲೈನ್ ನೋಂದಾವಣಿಯನ್ನು ಜಾರಿಗೆ ತಂದಿತು. ವಾರಾಂತ್ಯವೊಂದರಲ್ಲಿ ಬೆಳ್ಳಂಬೆಳಿಗ್ಗೆ ನೂರಾರು ಚಾರಣಿಗರು ಪುಷ್ಪಗಿರಿ ತಪ್ಪಲಿನ ಕುಮಾರ ಪರ್ವತ ಚಾರಣಕ್ಕೆ ಕಾದುನಿಂತಿದ್ದ ವೀಡಿಯೋ ವೈರಲ್ ಆಗಿದ್ದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತಂದಿತ್ತು. ಇದೀಗ ಚಾರಣಿಗರ ಸುರಕ್ಷತೆಗಾಗಿಯೇ ರೂಪಿಸಲಾಗುವ ಹೊಸ ಪ್ರಮಾಣಿತ ಕಾರ್ಯವಿಧಾನದಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಸಚಿವರು ಸೂಚನೆ ನೀಡಿದ್ದಾರೆ. ಚಾರಣಿಗರ ಮೇಲ್ವಿಚಾರಣೆಗೆ ತಂತ್ರಜ್ಞಾನವನ್ನು ಬಳಸುವ ದಿಸೆಯಲ್ಲಿ ವಿಶೇಷ ಗಮನ ಹರಿಸಲು ಸೂಚಿಸಿರುವ ಸಚಿವರು, ಅರಣ್ಯ ಅಭಿವೃದ್ಧಿಪಡಿಸಿರುವ ಇ-ಗಸ್ತು (e-Pಚಿಣಡಿoಟಟiಟಿg) ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವಂತೆ ತಿಳಿಸಿದ್ದಾರೆ. ಪ್ರಸ್ತುತ ದೇಶದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ‘ಎಂ-ಸ್ಟ್ರೈಪ್ಸ್’ ಎಂಬ ಆ್ಯಪ್ ಬಳಸಲಾಗುತ್ತಿದ್ದು, ಇದರ ಮಾದರಿಯಲ್ಲೇ ಚಾರಣಿಗರಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಈ ಆ್ಯಪ್ನ್ನು ಚಾರಣಕ್ಕೂ ಮುನ್ನ ಪ್ರತಿಯೊಬ್ಬ ಚಾರಣಿಗನ/ಳ ಮೊಬೈಲ್ನಲ್ಲಿ ಅಳವಡಿಸಲು ಸೂಚಿಸಲಾಗಿದ್ದು, ಇದರಿಂದ ದಾರಿ ತಪ್ಪಿದವರು ನಿರ್ದಿಷ್ಟವಾಗಿ ಯಾವ ಸ್ಥಳದಿಂದ ಸಂಪರ್ಕ ಕಡಿದುಕೊಂಡರು ಎಂಬುದು ತಿಳಿಯಲಿದ್ದು, ಅವರನ್ನು ಪತ್ತೆಹಚ್ಚುವುದು ಸುಲಭವಾಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸಮೂಹ ವಿಮೆ ಮಾಡಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಇದರಿಂದ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ. ಅಲ್ಲದೆ ಸೋಲೋ ಟ್ರೆಕ್ಕಿಂಗ್ (ಒಬ್ಬಂಟಿ ಚಾರಣ)ಕ್ಕೆ ಅನುಮತಿ ನಿರಾಕರಿಸುವ ಸಾಧ್ಯತೆಯೂ ಇದೆ. ಚಾರಣಿಗರ ಜೊತೆ ಹೋಗುವ ನೇಚರ್ ಗೈಡ್ಗಳಿಗೆ ಇನ್ನು ಮುಂದೆ ಹೆಚ್ಚಿನ ಹೊಣೆಗಾರಿಕೆ ಇರಲಿದೆ. ಪ್ರತಿ ಗೈಡ್ಗೆ ‘ವೈರ್ಲೆಸ್ ಸೆಟ್’ ನೀಡುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ನೆಟ್ವರ್ಕ್ ಇಲ್ಲದ ಕಾಡಿನ ಭಾಗದಲ್ಲೂ ಸಂಪರ್ಕ ಸಾಧ್ಯವಾಗುತ್ತದೆ. ಇನ್ನು ಮುಂದೆ ಪ್ರತೀ ತಂಡದ ಜತೆ ಗೈಡ್ ಇರಲಿದ್ದು, ಅರಣ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿಯೇ ಚಾರಣ ನಡೆಯಲಿದೆ ಎಂದೂ ಮೂಲಗಳು ತಿಳಿಸಿವೆ. - ಕೋವರ್ಕೊಲ್ಲಿ ಇಂದ್ರೇಶ್