ಸುಂಟಿಕೊಪ್ಪ, ಏ.8: ನಾರ್ಗಾಣೆ ಶ್ರೀದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ತಾ.13, 14 ಮತ್ತು 15 ರಂದು ಧರ್ಮದೈವದ ನೇಮೋತ್ಸವವು ನಡೆಯಲಿದೆ ಎಂದು ದೇವಸ್ಥಾನದ ಮೇಲ್ವಿಚಾರಕರಾದ ಬಿ.ಡಿ ರಾಜು ರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾ.13 ರಂದು ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಳಶ ನಡೆಯಲಿದೆ. ತಾ.14 ರಂದು ಮಂಗಳವಾರ ಸಂಜೆ 6 ಗಂಟೆಗೆ ಶ್ರೀ ಸ್ವಾಮಿ ಮತ್ತು ಅಮ್ಮನವರ ಭಂಡಾರ ಪೂಜೆ ನಡೆಯಲಿದೆ. ಸಂಜೆ 8 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ 9 ಗಂಟೆಯಿಂದ ಧರ್ಮ ದೇವತೆಯಾದ ಕಲ್ಲುರ್ಟಿ (ಪಾಷಣಮೂರ್ತಿ)ದೈವದ ನೇಮ ಹಾಗೂ ಸಿರಿಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಧರ್ಮ ದೈವವಾದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ನಡೆಯಲಿದೆ. ನಂತರ 3 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ದೈವರಾಜ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.

15 ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ಧೂಮಾವತಿ (ಜುಮಾದಿ) ದೈವದ ಹರಕೆಯ ಕೋಲ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.