ಸೋಮವಾರಪೇಟೆ, ಏ. 8: ಸಂಬಂಧಿಕರ ಮನೆಗೆ ಆಗಮಿಸಿದ್ದ ಯುವತಿ ಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾದಾಪುರ ಸಮೀಪದ ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ನಿವಾಸಿ ನವೀನ್ ಎಂಬವರ ಪುತ್ರಿ ಎಂ.ಪಿ. ನಂದಿತ (22) ಎಂಬಾಕೆ ಕಳೆದ ತಾ. 31.03.2026ರಂದು ಸೋಮವಾರಪೇಟೆ ಮಹದೇಶ್ವರ ಬಡಾವಣೆಯಲ್ಲಿರುವ ಚಿಕ್ಕಪ್ಪ ಸಂತೋಷ್ ಎಂಬವರ ಮನೆಗೆ ಆಗಮಿಸಿದ್ದು, ಏ. 1ರಂದು ಬೆಳಿಗ್ಗೆ ಮಾದಾಪರದಲ್ಲಿರುವ ಬ್ಯಾಂಕ್‍ಗೆ ತೆರಳುವುದಾಗಿ ಹೋದವಳು ಈವರೆಗೆ ವಾಪಸ್ ಆಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈಕೆಯ ಬಗ್ಗೆ ತಿಳಿದುಬಂದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ದೂ. 08276282040, ಮೊ. 9480804952 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.